DYFI ಸಕ್ರಿಯ ಕಾರ್ಯಕರ್ತ ವೇಣುಗೋಪಾಲ ನಿಧನ

Prasthutha|

ಮಂಗಳೂರು: DYFI ಸಕ್ರಿಯ ಕಾರ್ಯಕರ್ತ ವೇಣುಗೋಪಾಲ ಅಲ್ಪಕಾಲದ ಅಸೌಖ್ಯದಿಂದಾಗಿ ನಿಧನ ಹೊಂದಿದ್ದಾರೆ.
ಅವರಿಗೆ 47 ವರ್ಷ ವಯಸ್ಸಾಗಿತ್ತು.
ಕಮ್ಯುನಿಸ್ಟ್ ಕುಟುಂಬದಲ್ಲಿ ಹುಟ್ಟಿ ಬೆಳೆದ ಪರಿಣಾಮವಾಗಿ ಎಳೆಯ ಪ್ರಾಯದಲ್ಲೇ ಎಡಪಂಥೀಯ ವಿಚಾರಧಾರೆಗಳಿಗೆ ಮನಸೋತು DYFI ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ವೇಣುಗೋಪಾಲ ಅವರು, ಉರ್ವಾಸ್ಟೋರ್ ಪರಿಸರದಲ್ಲಿ ಯುವಜನರ ಹಾಗೂ ಜನಸಾಮಾನ್ಯರ ಮಧ್ಯೆ ಅತ್ಯಂತ ಪ್ರೀತಿಪಾತ್ರರಾಗಿದ್ದರು. ಸುಮಾರು 20 ವರ್ಷಗಳ ಹಿಂದೆ DYFI ಉರ್ವಾಸ್ಟೋರ್ ಘಟಕದ ಕ್ರಿಯಾಶೀಲ ಚಟುವಟಿಕೆಗಳಿಂದ ಸ್ಫೂರ್ತಿಗೊಂಡ ಇಡೀ ಊರೇ DYFI ನ ಹಿಂದೆ ನಿಂತಾಗ, ಇದರಿಂದ ಕಂಗಾಲಾದ ಅಕ್ಕಪಕ್ಕದ ಹಿಂದುತ್ವವಾದಿ ಶಕ್ತಿಗಳು ಉರ್ವಾಸ್ಟೋರ್ ಸುಂಕದಕಟ್ಟೆ ಪರಿಸರಕ್ಕೆ ನುಗ್ಗಿ ದಾಂಧಲೆ ನಡೆಸಲು ಮುಂದಾಯಿತು. ಕೂಡಲೇ ಎಚ್ಚೆತ್ತ DYFI ಸಂಗಾತಿಗಳು ವೇಣುಗೋಪಾಲರವರ ನೇತೃತ್ವದಲ್ಲಿ ಮತಾಂಧ ಶಕ್ತಿಗಳನ್ನು ಅಟ್ಟಾಡಿಸಿ ಹೊಡೆದದ್ದು ಇತಿಹಾಸ. ಮಂಗಳೂರು ನಗರದಲ್ಲಿ ಯಾವುದೇ ಕಡೆಗಳಲ್ಲಿ DYFI ಕಾರ್ಯಕರ್ತರ ಮೇಲೆ ದಾಳಿ ನಡೆದಾಗ ಜೀವದ ಹಂಗು ತೊರೆದು ಕಾರ್ಯಕರ್ತರ ಪರವಾಗಿ ದೃಢವಾಗಿ ನಿಂತು ಧೈರ್ಯ ನೀಡುತ್ತಿದ್ದರು. ಇಂತಹ ಧೈರ್ಯಶಾಲಿ ಯುವಕರಾಗಿದ್ದ ವೇಣು ಅವರು ತನ್ನ ಕೊನೆಯ ಉಸಿರಿನವರೆಗೂ DYFI ಹಾಗೂ ಕಮ್ಯುನಿಸ್ಟ್ ಪಕ್ಷದ ನಿಷ್ಠಾವಂತ ಹಿತೈಷಿಯಾಗಿದ್ದರು. ಅವರ ಅಕಾಲಿಕ ನಿಧನವು ದ.ಕ. ಜಿಲ್ಲೆಯ ಯುವಜನ ಚಳುವಳಿಗೆ ಅಪಾರ ನಷ್ಠವುಂಟಾಗಿದೆ ಎಂದು CPIM ಮತ್ತು DYFI ತನ್ನ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಅವರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಅಂತ್ಯಕ್ರಿಯೆಯ ಸಂದರ್ಭದಲ್ಲಿ CPIM ಜಿಲ್ಲಾ ನಾಯಕರಾದ ವಸಂತ ಆಚಾರಿ, ಸುನಿಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಸಂತೋಷ್ ಬಜಾಲ್,ನಗರ ಮುಖಂಡರಾದ ಸುರೇಶ್ ಬಜಾಲ್,ಮನೋಜ್ ಉರ್ವಾಸ್ಟೋರ್, ಮಾಜಿ ವಿಧ್ಯಾರ್ಥಿ ನಾಯಕರಾದ ಪ್ರವೀಣ್ ಬಂಟ್ವಾಳ ಮುಂತಾದವರು ಭಾಗವಹಿಸಿದ್ದರು.

Join Whatsapp