ಕೇಂದ್ರ ಸಚಿವ ಸ್ಥಾನಕ್ಕೆ ಡಿವಿ ಸದಾನಂದಗೌಡ ರಾಜೀನಾಮೆ

Prasthutha|

ಹೊಸದಿಲ್ಲಿ: ನರೇಂದ್ರ ಮೋದಿ ಅವರ ಸಂಪುಟ ಪುನಾರಚನೆಗೆ ಮುಂಚಿತವಾಗಿ ಸಚಿವರಾದ ಡಿವಿ ಸದಾನಂದಗೌಡ, ಸಂತೋಷ್ ಗಂಗ್ವಾರ್, ರಮೇಶ್ ಪೋಖ್ರಿಯಾಲ್, ನಿಶಾಂಕ್ ಮತ್ತು ದೇಬಶ್ರೀ ಚೌಧರಿ ಅವರು ಇಂದು ರಾಜೀನಾಮೆ ಸಲ್ಲಿಸಿದ್ದಾರೆ.

- Advertisement -


ಜ್ಯೋತಿರಾದಿತ್ಯ ಸಿಂಧಿಯಾ, ಸರ್ಬಾನಂದ ಸೋನೊವಾಲ್, ನಾರಾಯಣ್ ರಾಣೆ ಮತ್ತು ಪಶುಪತಿ ನಾಥ್ ಪರಾಸ್ ಸೇರಿದಂತೆ ಕೆಲವು ಸಂಭಾವ್ಯ ಹೆಸರುಗಳು ಹೊಸ ಸಂಪುಟಕ್ಕೆ ಸೇರ್ಪಡೆಯಾಗಲಿದೆ ಎಂದು ವರದಿಯಾಗಿದೆ. ಇದರೊಂದಿಗೆ 43 ನೂತನ ಸಚಿವರು ಇಂದು ಮೋದಿ ಕ್ಯಾಬಿನೆಟ್ ಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿದೆ.

ರಾಜ್ಯ ಅಥವಾ ಕೇಂದ್ರದಲ್ಲಿ ಆಡಳಿತಾತ್ಮಕ ಅನುಭವ ಹೊಂದಿರುವವರನ್ನು ಸಂಪುಟಕ್ಕೆ ಸೇರಿಸಲು ವಿಶೇಷ ಆದ್ಯತೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.



Join Whatsapp