ಕೋವಿಡ್ ಪರೀಕ್ಷಾ ವರದಿಯಲ್ಲಿ ತಾಂತ್ರಿಕ ಸಮಸ್ಯೆ | ಮಂಗಳೂರು ವಿಮಾನ ನಿಲ್ದಾಣದಲ್ಲಿ ದುಬೈಗೆ ತೆರಳುವ ಪ್ರಯಾಣಿಕರ ಪರದಾಟ !

Prasthutha|

ಮಂಗಳೂರು : ಮಂಗಳೂರಿನಲ್ಲಿ ನಡೆಸಿದ್ದ ಕೊರೊನಾ ಪರೀಕ್ಷಾ ವರದಿಯಲ್ಲಿ ತಾಂತ್ರಿಕ ಸಮಸ್ಯೆ ಎದುರಾದ ಕಾರಣ ದುಬೈಗೆ ಪ್ರಯಾಣಿಸಬೇಕಿದ್ದ ಕೆಲವು ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪರದಾಡಿದ ಘಟನೆ ಇಂದು ವರದಿಯಾಗಿದೆ.  ದುಬೈಗೆ ತೆರಳುವವರು 48 ಗಂಟೆ ಮೀರದ ಕೊರೊನಾ ಟೆಸ್ಟ್‌ ಪ್ರಮಾಣಪತ್ರ ಹೊಂದಿರಬೇಕು. ಕೊರೊನಾ ಟೆಸ್ಟ್‌ ಮಾಡಿರುವ ಆಸ್ಪತ್ರೆಯ ಕ್ಯುಆರ್‌‌‌‌ ಕೋಡ್‌ ಹೊಂದಿರಬೇಕು. ಆದರೆ, ಮಂಗಳೂರಿನ ಕೆಲ ಆಸ್ಪತ್ರೆಗಳಲ್ಲಿ ಕ್ಯುಆರ್‌ ಕೋಡ್‌ ಸಮಸ್ಯೆಯಿಂದಾಗಿ ಈ ತೊಂದರೆ ಎದುರಾಗಿದ್ದು, ಕೆಲವರು ತಮ್ಮ ಪ್ರಯಾಣವನ್ನೇ ಮೊಟಕುಗೊಳಿಸಬೇಕಾಯಿತು.

- Advertisement -

ಭಾರತದಿಂದ ದುಬೈಗೆ ತೆರಳುವ ಪ್ರಯಾಣಿಕರ ಕೊರೊನಾ ಟೆಸ್ಟ್‌ ಪ್ರಮಾಣಪತ್ರದ ಕುರಿತಂತೆ ದುಬೈ ಸರ್ಕಾರ ಹೊಸ ನಿಯಮಾವಳಿಯನ್ನು ಜಾರಿ ಮಾಡಿದ್ದು, ಅದರ ಮಾಹಿತಿ ಪ್ರಕಾರ ಮಂಗಳೂರಿನ ಕೆಲ ಆಸ್ಪತ್ರೆಯವರಿಗೆ ಈ ವಿಚಾರ ತಡವಾಗಿ ತಿಳಿದ ಕಾರಣ ಈ ಸಮಸ್ಯೆ ಎದುರಾಗಿತ್ತು ಎನ್ನಲಾಗಿದೆ.

ವಿದೇಶಕ್ಕೆ ಪ್ರಯಾಣಿಸುವವರ ಅದರಲ್ಲೂ ಮುಖ್ಯವಾಗಿ ದುಬೈಗೆ ಪ್ರಯಾಣಿಸುವವರು ಹೊಂದಿರಬೇಕಾದ ಕೊರೊನಾ ಟೆಸ್ಟ್‌ ಪ್ರಮಾಣಪತ್ರದ ಅವಧಿಯನ್ನು 72 ಗಂಟೆಯಿಂದ 48 ಗಂಟೆಗೆ ಇಳಿಸಲಾಗಿದೆ.

Join Whatsapp