ಅಬುದಾಭಿ: ಒಂದು ಬಾರಿ ಲಕ್ಕಿ ಡ್ರಾ ಮೂಲಕ ವಿಜೇತರಾದರೆ ಅದೃಷ್ಟವಂತ ಅಥವಾ ಭಾಗ್ಯವಂತ ಅನ್ನಬಹುದು. ಆದರೆ ಅತ್ಯಧ್ಭುತವೆಂಬಂತೆ ಇಲ್ಲೊಬ್ಬರಿಗೆ ಮೂರು ಬಾರಿ ಅದೃಷ್ಟ ಖುಲಾಯಿಸಿದೆ.
ಕೇರಳದ ಸುನೀಲ್ ಶ್ರೀಧರ್ ಎಂಬ ವ್ಯಕ್ತಿ ದುಬೈಯ ಮಿಲ್ಲೇನಿಯಂ ಮಿಲಿಯನೇರ್ ಡ್ಯೂಟಿ ಫ್ರೀ ಲಕ್ಕೀ ಡ್ರಾದಲ್ಲಿ 7 ಕೋಟಿ ವಿಜೇತರಾಗಿದ್ದಾರೆ. ಈ ಹಿಂದೆ 2019 ಸೆಪ್ಟೆಂಬರ್ ನಲ್ಲಿ ಒಂದು ದಶಲಕ್ಷ ಯು. ಎಸ್ ಡಾಲರ್ ವಿಜೇತರಾಗಿದ್ದ ಇವರು, 2020 ಫೆಬ್ರವರಿಯಲ್ಲಿ ರೇಂಜ್ ರೋವರ್ ಕಾರ್ ಬಹುಮಾನವಾಗಿ ಗಿಟ್ಟಿಸಿಕೊಂಡಿದ್ದರು.
ಇದೀಗ ದುಬೈಯ ಡ್ಯೂಟಿ ಫ್ರೀ ಸಂಸ್ಥೆಯ ಎಂಟನೇ ಬಾರಿಯ ಲಕ್ಕಿ ಡ್ರಾ ಇತಿಹಾಸದಲ್ಲಿ ಒಬ್ಬರೇ 3 ಬಾರಿ ಅದೃಷ್ಟಶಾಲಿಯಾಗಿದ್ದು ವಿಶೇಷವೇ ಸರಿ ಎಂದು ಡ್ಯೂಟಿ ಫ್ರೀ ಸಂಸ್ಥೆ ತಿಳಿಸಿದೆ.
ಅಬುಧಾಬಿಯಲ್ಲಿ ನೆಲೆಸಿರುವ 55 ವರ್ಷ ವಯಸ್ಸಿನ ಸುನಿಲ್ ಶ್ರೀಧರ್ ರವರು ಸ್ವಂತ ಆನ್ಲೈನ್ ಟ್ರೇಡಿಂಗ್ ಸಂಸ್ಥೆಯನ್ನು ಹೊಂದಿದ್ದಾರೆ.