ರಾಯಚೂರು ವಿಮಾನ ನಿಲ್ದಾಣಕ್ಕೆ ಅಂಬೇಡ್ಕರ್ ಹೆಸರಿಡಲು ಒತ್ತಾಯ

Prasthutha|

ರಾಯಚೂರು ಜೂನ್ 18 : ರಾಯಚೂರು ವಿಮಾನ ನಿಲ್ದಾಣ ಏಗನೂರು ಗ್ರಾಮದ ಹೆಚ್ಚು ಭೂಮಿಯನ್ನು ಸ್ವಾಧೀನಪಡಿಸಿದೆ. ಇದರಿಂದಾಗಿ ವಿಮಾನ ನಿಲ್ದಾಣದ ದಾಖಲಾತಿಗಳಲ್ಲಿ ಏಗನೂರು ಗ್ರಾಮ ಹೆಸರನ್ನು ಉಲ್ಲೇಖಿಸಬೇಕು, ಮಾತ್ರವಲ್ಲ ಈ ವಿಮಾನ ನಿಲ್ದಾಣಕ್ಕೆ ಡಾ. ಬಿ ಆರ್ ಅಂಬೇಡ್ಕರ್ ಹೆಸರು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಮುಖಂಡರು ಒತ್ತಾಯಿಸಿದರು. ವಿಮಾನ ನಿಲ್ದಾಣ ದಾಖಲೆಯ ಪ್ರಕಾರ ಮತ್ತು ನೀಲಿ ನಕಾಶೆಯ ಪ್ರಕಾರ ಸದರಿ ದಾಖಲಾತಿಗಳಲ್ಲಿ ಏಗನೂರು ಗ್ರಾಮದ ಹೆಸರು ಎಂದು ಅಧಿಕೃತವಾಗಿ ಘೋಷಣೆ ಮಾಡಿ ನಮೂದಿಸಬೇಕು ಎಂದು ಒತ್ತಾಯಿಸಿದರು .

- Advertisement -


ನಗರಸಭೆಯ ಕೆಲವು ರಾಜಕಾರಣಿಗಳು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಯರಮರಸ್ ದಂಡು ವಿಮಾನ ವಿಮಾನ ನಿಲ್ದಾಣವೆಂದು ಮತ್ತು ಈ ವಿಮಾನ ನಿಲ್ದಾಣಕ್ಕೆ ಶ್ರೀ ರಾಘವೇಂದ್ರ ಸ್ವಾಮೀಜಿ ಹೆಸರನ್ನು ನಾಮಕರಣ ನಿರ್ಣಯವನ್ನು ಮಾಡಿರುವುದು ಖಂಡನೀಯ. ಭಾರತ ದೇಶವು ಸರ್ವಜನಾಂಗದ ಶಾಂತೀಯ ತೋಟ. ಅನೇಕ ಜಾತಿಗಳು, ಭಾಷೆಗಳಿಂದ ಕೂಡಿ ಏಕೈಕ ಪ್ರಜಾಪಭುತ್ವ ರಾಷ್ಟ್ರವಾಗಿದೆ. ಇಂತಹ ಪ್ರಬುದ್ದ ಭಾರತದಲ್ಲಿ ಕೇವಲ ಸವರ್ಣೀಯ ಸ್ವಾಮಿಗಳ ಹೆಸರನ್ನು ಸೂಚಿಸಿರುವುದು ಈ ಸಂವಿಧಾನ ಆಶಯಗಳಿಗೆ ವಿರುದ್ದ ಎಂದು ದೂರಿದರು. ಈ ಸಂದರ್ಭದಲ್ಲಿ ದಲಿತ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು



Join Whatsapp