ಪಾನಮತ್ತನಾಗಿ ಸ್ವಂತ ಮನೆಗೇ ಬೆಂಕಿಯಿಟ್ಟ | ಆರರ ಬಾಲೆ ಸೇರಿ 6 ಜನರ ಸಜೀವ ದಹನ

Prasthutha: April 3, 2021

ಮಡಿಕೇರಿ : ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯಲ್ಲಿರುವ ಕೊಳೇರ ವಸಂತ(ಚಿಟ್ಟಿಯ್ಯಪ್ಪ) ನವರ ಲೈನ್ ಮನೆಯಲ್ಲಿ ವಾಸವಿದ್ದ ಎರವರ ಮಂಜು ವಾಸವಿದ್ದರು.ಬೆಳಗಿನ ಜಾವ ಎರಡು ಗಂಟೇಗೆ ಅವರಲ್ಲಿಗೆ ಬಂದ ಸಂಬಂಧಿಕರು ಸೇರಿ ಎಂಟು ಜನ ಮಲಗಿದ್ದ ಸಮಯದಲ್ಲಿ ಮಂಜುವಿನ ತಂದೆ ಎರವರ ಬೋಜ ಪಾನಮಕ್ತನಾಗಿ ಲೈನ್ ಮನೆಯ ಬಾಗಿಲು ಕಿಟಕಿಯನ್ನು ಹೊರಗಿನಿಂದ ಹಾಕಿ ಮನೆ ಮೇಲೆ ಹತ್ತಿ ಹಂಚು ತೆಗೆದು ಪೆಟ್ರೋಲ್  ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.    ಇದರ ಪರಿಣಾಮ ಸ್ಥಳದಲ್ಲಿಯೇ ಆರು ವಷ೯ದ ಹೆಣ್ಣು ಮಗು ಸೇರಿ ಆರು ಜನ ಸಜೀವ ದಹನವಾಗಿದ್ದಾರೆ.

ಮೂರು ಮಂದಿಯನ್ನೂ ಮೈಸೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರಲ್ಲಿ ಆರು ಮತ್ತು  ಏಳು ವಷ೯ದ ಎರಡು ಪುಟ್ಟ ಮಕ್ಕಳೂ ಸೇರಿದ್ದಾರೆ.

  ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಮುಗ್ಗಟ್ಟುಗೇರಿ ಗ್ರಾಮದ ಕೋಳೆರ ಚಿಟ್ಟಿಯಪ್ಪ ರವರ ಲೈನ್ ಮನೆಯಲ್ಲಿ ವಾಸವಾಗಿದ್ದ ಪಣಿಎರವರ ಸೀತೆ ಪ್ರಾಯ 45 ವರ್ಷ , ಬೇಬಿ, ಪ್ರಾಯ 4೦ ವರ್ಷ,ಪ್ರಾರ್ಥನ ಪ್ರಾಯ 6 ವರ್ಷ  ವಾಗಿದ್ದು ,  ಬೋಜ ಮತ್ತು ಹೆಂಡತಿಯು ಕುಡಿದು ಜಗಳವಾಗಿ ಮದ್ಯ ರಾತ್ರಿ ಲೈನ್ ಮನೆಯ ಮೇಲೆ ಹತ್ತಿ ಪೇಟ್ರೋಲ್ ಹಾಕಿ ಬೆಂಕಿ ಹಚ್ಚಿ ಮೇಲಿನ ಮೂವರನ್ನು ಕೊಲೆ ಮಾಡಿದ್ದು,ಜೊತೆಯಲ್ಲಿದ್ದ ಉಳಿದ 2 ಜನರು ಸುಟ್ಟ ಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿ ಮೈಸೂರು ‌ಕೆ.ಆರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!