ಮಹಾರಾಷ್ಟ್ರ ಮಾದರಿಯಲ್ಲಿ ಬಿಜೆಪಿ ವಿರುದ್ಧ ದೇಶ ಒಗ್ಗೂಡಬೇಕಿದೆ: ಶಿವಸೇನೆ

Prasthutha|

ಮಹಾರಾಷ್ಟ್ರ ಮಾದರಿಯಲ್ಲಿ ದೇಶದ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಒಂದಾಗಬೇಕೆಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಕರೆ ನೀಡಿದ್ದಾರೆ.

- Advertisement -

ಮಹಾರಾಷ್ಟ್ರದಲ್ಲಿ ಮೂರು ಪ್ರತ್ಯೇಕ ಸೈದ್ಧಾಂತಿಕ ಪಕ್ಷಗಳು ಸೇರಿ ಮಹಾ ವಿಕಾಸ್ ಅಘಾಡಿ (ಎಂವಿಎ) ಎಂಬ ಮೈತ್ರಿಕೂಟದಲ್ಲಿ ಸರ್ಕಾರ ರಚಿಸಿದ್ದವು.

ಕಳೆದ ಒಂದೂವರೆ ವರ್ಷಗಳಿಂದ ಅಧಿಕಾರದಲ್ಲಿರುವ ಈ ಸರ್ಕಾರ ದೇಶದಲ್ಲಿ ಬಿಜೆಪಿಯನ್ನು ವಿರೋಧಿಸುವ ಪಕ್ಷಗಳಿಗೆ ಮಾದರಿಯಾಗಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.

- Advertisement -

ಈ ಪ್ರಯೋಗವನ್ನು ಯುಪಿಎ ನಾಯಕತ್ವದಲ್ಲಿ ರಾಷ್ಟ್ರಮಟ್ಟದಲ್ಲಿ ಅನುಕರಿಸಬೇಕು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೇಶದ 27 ವಿರೋಧ ಪಕ್ಷದ ಮುಖಂಡರಿಗೆ ಬರೆದಿರುವ ಪತ್ರವು ಇದರ ಅಗತ್ಯತೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.

ಹೊಸ ರಾಜಕೀಯ ಮೈತ್ರಿಕೂಟ ರೂಪಿಸಲು ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಬೇಕು. 1975 ರ ವೇಳೆ ಜಯಪ್ರಕಾಶ್ ನಾರಾಯಣನ್ ಎಲ್ಲಾ ವಿರೋಧ ಪಕ್ಷಗಳನ್ನು ಒಂದುಗೂಡಿಸಿದ್ದರು. “ದುರದೃಷ್ಟವಶಾತ್, ಅಂತಹ ನಾಯಕರು ಇಂದು ಇಲ್ಲ” ಎಂದು ಅವರು ಖೇದ ವ್ಯಕ್ತಪಡಿಸಿದರು.

Join Whatsapp