ಕುಡಿದ ಮತ್ತಿನಲ್ಲಿ ಸ್ನೇಹಿತರ ಗಲಾಟೆ: ಓರ್ವನ ಕೊಲೆ

Prasthutha|

ಬೆಂಗಳೂರು: ಕುಡಿದ ಮತ್ತಿನಲ್ಲಿ‌ ಸ್ನೇಹಿತರ ನಡುವೆ ಮಾತಿನ ಚಕಮಕಿ ನಡೆದು, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ‌ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚನ್ನಪಟ್ಟಣದ ಲಾಳಾಘಟ್ಟ ಕ್ರಾಸ್ ಬಳಿ ನಡೆದಿದೆ.

ಚನ್ನಪಟ್ಟಣದ ಅಂಬೇಡ್ಕರ್ ನಗರದ ಪ್ರಮೋದ್ (33) ಕೊಲೆಯಾದವರು,
ಲಾಳಾಘಟ್ಟ ಕ್ರಾಸ್ ಬಳಿ ಪ್ರಮೋದ್ ಮತ್ತು ಅವನ ಸ್ನೇಹಿತರು ನಿನ್ನೆ ರಾತ್ರಿ ಮದ್ಯದ ಪಾರ್ಟಿ ಮಾಡಿದ್ದಾರೆ.

- Advertisement -

ಪಾರ್ಟಿ ವೇಳೆ ಕಂಠಮಟ್ಟ ಕುಡಿದ ಎಲ್ಲರೂ ಕ್ಷುಲಕ‌ ಕಾರಣಕ್ಕೆ ಜಗಳ ಮಾಡಿಕೊಂಡು ಆಕ್ರೋಶಗೊಂಡ ಸ್ನೇಹಿತರು ಪ್ರಮೋದ್ ತಲೆ ಮೇಲೆ ಕತ್ತು ಎತ್ತಿ ಹಾಕಿ‌ ಬರ್ಬರವಾಗಿ ಕೊಲೆ
ಮಾಡಿ ಪರಾರಿಯಾಗಿದ್ದಾರೆ.
ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.

- Advertisement -