ವಿದ್ಯುತ್‌ ಸರ್ವಿಸ್ ವೈರ್‌‌ ತಗುಲಿ ತಾಯಿ, ಇಬ್ಬರು ಮಕ್ಕಳ ಮೃತ್ಯು

Prasthutha|

ಕಲಬುರಗಿ : ವಿದ್ಯುತ್ ಸರ್ವಿಸ್ ವೈರ್ ತಗುಲಿ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಚಿಂಚೋಳಿ ಪಟ್ಟಣದ ಧನಗರದಲ್ಲಿ ನಡೆದಿದೆ.

ಮೃತರನ್ನು ತಾಯಿ ಶರಣಮ್ಮ(45), ಮಕ್ಕಳಾದ ಮುಖೇಶ್ (22) ಮತ್ತು ಸುರೇಶ್​​ (20) ಎಂದು ಗುರುತಿಸಲಾಗಿದೆ.

- Advertisement -

ಮನೆ ಸಮೀಪ ತಂದಿಟ್ಟಿದ್ದ ತೊಗರಿ ಹೊಟ್ಟು ನೆನೆಯುತ್ತದೆ ಎಂದು ಅದನ್ನು ಮುಚ್ಚಲು ಶರಣಮ್ಮ ಹೊರ ಹೋಗಿದ್ದಾರೆ. ಮಕ್ಕಳಾದ ಮುಖೇಶ್, ಸುರೇಶ ಹಿಂಬಾಲಿಸಿ ಹೋಗಿದ್ದು ಮೂವರಿಗೂ ವಿದ್ಯುತ್ ಸ್ಪರ್ಶಿಸಿದೆ. ಪರಿಣಾಮ ಮೂವರು ಮೃತಪಟ್ಟಿದ್ದಾರೆ.

- Advertisement -