35 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶ: ಮೂವರ ಬಂಧನ

Prasthutha|

ಬೆಂಗಳೂರು: ಬೆಂಗಳೂರಿನಲ್ಲಿ ಗೋವಿಂದಪುರ ಪೊಲೀಸರು ಸುಮಾರು 35 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

- Advertisement -

ರಂಜಿತ್ ಬಾನ್ ಗುಪ್ತಾ, ಅಂಡ್ರೆಸ್ ಪಿಲಿಪೋ, ರಾಜೇಶ್ ಬಂಧಿತ ಆರೋಪಿಗಳು.

ಬಂಧಿತರಿಂದ 70 ಕೆಜಿ ಮೆಥಕ್ವಾಲೋನ್ ಡ್ರಗ್, 6.5 ಕೆಜಿ ಎಮ್ಡಿಎಮ್ 75 ಗ್ರಾಂ ಕೊಕೇನ್, 300 ಗ್ರಾಂ ಟ್ರೊಮೊಡೊಲ್ ಡ್ರಗ್ಸ್ನ ವಶಕ್ಕೆ ಪಡೆದಿದ್ದಾರೆ. ಮೆಥಕ್ವಾಲೋನ್ ಡ್ರಗ್ ಒಂದು ಗ್ರಾಂಗೆ 5 ಸಾವಿರ ರೂಪಾಯಿ. 2016ರ ನಂತರ ಇದೇ ಮೊದಲ ಬಾರಿಗೆ ಈ ಡ್ರಗ್ ಪತ್ತೆಯಾಗಿದೆ.

Join Whatsapp