ರಾಮನವಮಿ, ಹನುಮಾನ್ ಜಯಂತಿ ಆಚರಿಸುವುದಾದರೆ ರಮಝಾನ್ ಯಾಕೆ ಆಚರಿಸಬಾರದು: ಕಾಂಗ್ರೆಸ್ ಗೆ ಆರೀಫ್ ಮಸೂದ್ ಪ್ರಶ್ನೆ

Prasthutha|

 ಭೋಪಾಲ್: “ರಾಮ ನವಮಿ, ಹನುಮಾನ್ ಜಯಂತಿ ಆಚರಿಸಲು ಪಕ್ಷವೇ ಹೇಳುವುದಾದರೆ ರಮಝಾನ್ ಆಚರಿಸಲು ಯಾಕೆ ಆದೇಶಿಸಿಲ್ಲ?” ಎಂದು ಭೋಪಾಲ್ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರೀಫ್ ಮಸೂದ್ ಪ್ರಶ್ನಿಸಿದ್ದಾರೆ.

- Advertisement -

ಇತ್ತೀಚೆಗೆ ಕಾಂಗ್ರೆಸ್ ಪಕ್ಷ ರಾಮ ನವಮಿ, ಹನುಮಾನ್ ಜಯಂತಿ ಆಚರಿಸಲು ಕರೆ ನೀಡಿತ್ತು. ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷ ಒಂದು ಧರ್ಮದ ಆಚರಣೆಗೆ ಮಾತ್ರ ಕರೆ ನೀಡಿದ್ದಕ್ಕೆ ಆರೀಫ್ ಮಸೂದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

2019ರಲ್ಲಿ ಮುಖ್ಯಮಂತ್ರಿಯಾಗಿದ್ದ ಕಮಲನಾಥ್ ಅವರು ಭೋಪಾಲ್ ಮೆಟ್ರೋಗೆ ಭೋಜ್ ಮೆಟ್ರೋ ಎಂದು ನಾಮಕರಣ ಮಾಡಿದಾಗಲೂ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆರೀಫ್ ಅವರು, ಭೋಪಾಲ್ ಮೆಟ್ರೋ ಎಂದೇ ಇರಲಿ ಎಂದು ಒತ್ತಾಯಿಸಿದ್ದರು.

- Advertisement -

“ನಾನು ನನ್ನ ಕ್ಷೇತ್ರದ ಜನರ ಅಭಿಪ್ರಾಯ ಹೇಳುತ್ತಿದ್ದೇನೆಯೇ ಹೊರತು ನನ್ನ ಅಭಿಪ್ರಾಯವಲ್ಲ” ಎನ್ನುವುದೂ ಆರೀಫ್ ಅವರ ಸ್ಪಷ್ಟನೆಯಾಗಿತ್ತು.

ಈಗ ಆರೀಫ್ ಮಸೂದ್ ಅವರು ತಮ್ಮ ಪಕ್ಷದ ನಾಯಕರ ವಿರುದ್ಧ ಮತ್ತೊಮ್ಮೆ ಧ್ವನಿ ಎತ್ತಿದ್ದಾರೆ. ರಾಮ ನವಮಿ ಮತ್ತು ಹನುಮಾನ್ ಜಯಂತಿ ಆಚರಿಸುವಂತೆ ಮಧ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ನಾಯಕರು ಹೇಳಿದ್ದರು. ರಾಜ್ಯಾಧ್ಯಕ್ಷ ಕಮಲನಾಥ್ ರೇ ಪಕ್ಷಕ್ಕೆ ಸಹಿ ಹಾಕಿದ್ದರು.

2001ರಲ್ಲಿ ಯುವ ಕಾಂಗ್ರೆಸ್ ನಾಯಕರಾಗಿ ಮಸೂದ್,  ಭೋಪಾಲ್ ಸುತ್ತ ಮುತ್ತ ರಚನಾತ್ಮಕ ಮಾತು ಮತ್ತು ಕೆಲಸದಿಂದ ಹೆಸರು ಮಾಡಿದ್ದರು. ಮುಸ್ಲಿಮರನ್ನು ಕೀಳಾಗಿ ತೋರಿಸಲಾಗಿದೆ ಎಂದು ಗದಾರ್ ಎ ಪ್ರೇಮ್ ಕಥಾ ಸಿನಿಮಾದ ವಿರುದ್ಧ ಪ್ರತಿಭಟಿಸಿ ಬಂಧನಕ್ಕೊಳಗಾಗಿದ್ದರು. ಈ ವಿಚಾರದಲ್ಲಿ ಕಾಂಗ್ರೆಸ್  ಅವರನ್ನು ಪಕ್ಷದಿಂದ ಹೊರ ಹಾಕಿತ್ತು.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp