ಡ್ರಗ್ಸ್ ಮಾರಾಟ: ನೈಜೀರಿಯಾದ ಚಿತ್ರ ನಟ ಬೆಂಗಳೂರಿನಲ್ಲಿ ಸೆರೆ

Prasthutha|

ಬೆಂಗಳೂರು: ನೈಜಿರೀಯಾದಲ್ಲಿ ಖ್ಯಾತ ನಟನೊಬ್ಬ ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ ಕೇಸ್ ನಲ್ಲಿ ಜೈಲು ಸೇರಿದ್ದಾನೆ.
ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಯ ಪ್ರಖ್ಯಾತ ಸಿನಿಮಾಗಳಲ್ಲಿ ಅಭಿನಯಿಸಿದ್ದ ನೈಜೀರಿಯಾದ ಚಕುವುಮೆ ಮಲ್ವಿನ್ (45) ಬಂಧಿತ ಆರೋಪಿ.

- Advertisement -

ಆರೋಪಿಯಿಂದ 8 ಲಕ್ಷ ಮೌಲ್ಯದ ಬಾಟಲಿಯಲ್ಲಿದ್ದ 250ಎಂ.ಎಲ್ ಅಶೀಶ್ ಆಯಿಲ್, 15 ಗ್ರಾಂ ಎಂಡಿಎಂಎ, ಮೊಬೈಲ್, 2 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ತಿಳಿಸಿದ್ದಾರೆ.

ಆರೋಪಿಯು ಪ್ರಸಿದ್ಧ ವಿಶ್ವರೂಪಂ, ಸಿಂಗಂ, ಅಣ್ಣಾಬಾಂಡ್, ದಿಲ್ವಾಲೆ, ಜಂಬೂಸವಾರಿ, ಪರಮಾತ್ಮದಂತಹ 20ಕ್ಕೂ ಅಧಿಕ ಚಿತ್ರಗಳಲ್ಲಿ ಸಹ ನಟನಾಗಿ ನಟಿಸಿರುವುದು ತನಿಖೆಯಲ್ಲಿ ಕಂಡು ಬಂದಿದೆ.

- Advertisement -

ಆರೋಪಿಯು ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ವ್ಯಾಪಾರಿಗಳು, ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು, ಶ್ರೀಮಂತರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಎಂದು ಹೇಳಿದರು.

ಆರೋಪಿಯು ವೈದ್ಯಕೀಯ ವೀಸಾದಡಿ ಭಾರತಕ್ಕೆ ಬಂದು ಮುಂಬೈನಲ್ಲಿ 2 ತಿಂಗಳ ಕಾಲ ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ನಟನ ತರಬೇತಿ ಪಡೆದಿದ್ದ. ಅಲ್ಲದೆ 6 ವರ್ಷಗಳ ಹಿಂದೆ ನೈಜೀರಿಯಾದ ಅಬುಜಾದಲ್ಲಿ ನಟನ ತರಬೇತಿ ಪಡೆದಿರುವುದು ತನಿಖೆಯಲ್ಲಿ ಕಂಡು ಬಂದಿದೆ.



Join Whatsapp