ಹಡಗಿನ ಮೇಲೆ ಡ್ರೋನ್ ದಾಳಿ: ಅಮೆರಿಕದ ಆರೋಪ ನಿರಾಕರಿಸಿದ ಇರಾನ್

Prasthutha|

ಟೆಹ್ರಾನ್: ಹಿಂದೂ ಮಹಾಸಾಗರದಲ್ಲಿ ಕೆಮಿಕಲ್ ಟ್ಯಾಂಕರ್ ಮೇಲೆ ಇರಾನ್ ದಾಳಿ ನಡೆಸಿದೆ ಎಂದು ಅಮೆರಿಕ ಮಾಡಿದ ಆರೋಪವನ್ನು ಇರಾನ್ ತಳ್ಳಿ ಹಾಕಿದೆ. ಭಾರತದ ಕರಾವಳಿಯಿಂದ 200 ನಾಟಿಕಲ್ ಮೈಲು ದೂರದಲ್ಲಿ ಹಡಗಿನ ಮೇಲೆ ಇರಾನ್ ದಾಳಿ ನಡೆಸಿತ್ತು ಎಂದು ಅಮೆರಿಕ ಆರೋಪ ಮಾಡಿತ್ತು. ಇಂತಹ ಆರೋಪಗಳು ಆಧಾರರಹಿತ. ನಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡುವ ಬದಲು ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧದಲ್ಲಿ ತನ್ನದೇ ಪಾತ್ರದ ಬಗ್ಗೆ ಅಮೆರಿಕ ತನಿಖೆ ನಡೆಸಲಿ ಎಂದು ಇರಾನ್ ನ ವಿದೇಶಾಂಗ ಸಚಿವಾಲಯದ ವಕ್ತಾರ ನಾಸಿರ್ ಕನಾನಿ (Nasser Kanaani) ಹೇಳಿದ್ದಾರೆ.ಇರಾನ್ ಉಡಾವಣೆ ಮಾಡಿದ ಡ್ರೋನ್ ಭಾರತದ ಬಳಿ ಸಾಗುತ್ತಿದ್ದಾಗ ಜಪಾನ್ ಒಡೆತನದ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ ಎಂಬ ಅಮೆರಿಕದ ಹೇಳಿಕೆ ಸುಳ್ಳು ಎಂದು ಅವರು ಪ್ರತಿಪಾದಿಸಿದರು.ಯೆಮೆನ್‌ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿ ನಡೆಸುತ್ತಿರುವುದರಿಂದ ಜಾಗತಿಕ ವ್ಯಾಪಾರಕ್ಕೆ ತೀವ್ರ ಹೊಡೆತ ಬಿದ್ದಿದೆ. ಈ ನಡುವೆ ಇರಾನ್ ಮೇಲೆ ಗಂಭೀರ ಆರೋಪ ಅಮೆರಿಕ ಮಾಡಿತ್ತು.

Join Whatsapp