ಕೋವಿಡ್ ನಿಯಮ ಉಲ್ಲಂಘಿಸಿ ‘ಡಾಕ್ಟರ್ಸ್ ಡೇ’ ಆಚರಣೆ | IMA ವಿರುದ್ಧ ಡಾ.ಶ್ರೀನಿವಾಸ ಕಕ್ಕಿಲಾಯ ದೂರು

Prasthutha|

ಮಂಗಳೂರು: ಜುಲೈ 29ರಂದು ನಗರದಲ್ಲಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆಯೋಜಿಸಲಾಗಿದ್ದ ವೈದ್ಯರ ದಿನಾಚರಣೆಯ ಕಾರ್ಯಕ್ರಮದ ವೇಳೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾಗಿ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ IMA ವಿರುದ್ಧ ನಗರದ ಪಾಂಡೇಶ್ವರ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದಾರೆ.

- Advertisement -

ಅಂದಿನ ಕಾರ್ಯಕ್ರಮದಲ್ಲಿ ಐಎಂಎ ರಾಜ್ಯ ಘಟಕಾಧ್ಯಕ್ಷ ಡಾ.ಎಂ.ವೆಂಕಟಾಚಲಪತಿ ಸಹಿತ ಮಂಗಳೂರು ವಿಭಾಗದ ಹಲವು ಪ್ರಮುಖರು ಭಾಗವಹಿಸಿದ್ದರು. ಈ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಕೋವಿಡ್ ನಿಯಮವನ್ನ ಉಲ್ಲಂಘಿಸಿದ್ದಾಗಿ ಐಎಂಎ ಪದಾಧಿಕಾರಿಗಳ ವಿರುದ್ಧ ಡಾ.ಕಕ್ಕಿಲಾಯ ದೂರು ನೀಡಿದ್ದಾರೆ.

ದಿನಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿದ್ದ ವರದಿಯನ್ನ ಆಧರಿಸಿ ಡಾ.ಕಕ್ಕಿಲಾಯ ಅವರು ದೂರನ್ನ ದಾಖಲಿಸಿದ್ದಾರೆ. ದೂರಿನನ್ವಯ ವಿಚಾರಣೆಗೆ ಮುಂದಾಗಿರುವ ನಗರದ ಪಾಂಡೇಶ್ವರ ಠಾಣಾ ಪೊಲೀಸರು ಪ್ರಾಥಮಿಕ ತನಿಖೆ ನಂತರ ಎಫ್ಐಆರ್ ಇಲ್ಲವೇ ಘಟನೆಯ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರುವ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ.

- Advertisement -

ಇತ್ತೀಚೆಗಷ್ಟೇ ಶಾಪಿಂಗ್ ಮಾಲ್ ವೊಂದರಲ್ಲಿ ಮಾಸ್ಕ್ ಧರಿಸದೇ ಇದ್ದ ಕಾರಣಕ್ಕಾಗಿ ವೈದ್ಯ ಡಾ.ಶ್ರೀನಿವಾಸ ಕಕ್ಕಿಲಾಯ ವಿರುದ್ಧ ನಗರದ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ಸಂದರ್ಭ, ಐಎಂಎ ಮಂಗಳೂರು ವಿಭಾಗದ ಕೆಲವು ಪದಾಧಿಕಾರಿಗಳು ಡಾ.ಕಕ್ಕಿಲಾಯ ವರ್ತನೆಗೆ ಖಂಡನೆ ವ್ಯಕ್ತಪಡಿಸಿದ್ದರು. ಅಚ್ಚರಿ ಅಂದ್ರೆ, ಅದೇ ಪದಾಧಿಕಾರಿಗಳ ವಿರುದ್ಧ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದಡಿ ಇದೀಗ ಡಾ.ಶ್ರೀನಿವಾಸ ಕಕ್ಕಿಲಾಯ ದೂರನ್ನ ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.  

Join Whatsapp