ಉನ್ನಾವೊ ತನಿಖೆಯಲ್ಲಿ ಸಿಬಿಐ ಲೋಪವೆಸಗಿಲ್ಲ: ದೆಹಲಿ ಹೈಕೋರ್ಟ್

Prasthutha|

ದೆಹಲಿ, ಆಗಸ್ಟ್ 1: ಉತ್ತರ ಪ್ರದೇಶದ ಉನ್ನಾವೊ ಎಂಬಲ್ಲಿ ದಲಿತ ಹೆಣ್ಣು ಮಗಳ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಸಿಬಿಐ ಲೋಪ ಎಸಗಿಲ್ಲ ಎಂದು ದೆಹಲಿ ನ್ಯಾಯಾಲಯ ಹೇಳಿದೆ.

- Advertisement -

ಸಂತ್ರಸ್ತೆಯನ್ನು 2019 ರಲ್ಲಿ ಅಪಘಾತ ಎಂಬಂತೆ ಬಿಂಬಿಸಿ ಕೊಲೆ ನಡೆಸಲು ಯತ್ನಿಸಲಾಗಿತ್ತು ಎಂದು ದೂರುದಾರರು ಆರೋಪಿಸಿದ್ದರು.
ಸಿಬಿಐ ನಡೆಸಿದ ತನಿಖೆಯ ನಿಷ್ಠೆ, ನಿಖರತೆ ಮತ್ತು ಪ್ರಾಮಾಣಿಕತೆಯನ್ನು ಅನುಮಾನಿಸಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಉನ್ನಾವೊ ಸಂತ್ರಸ್ತೆ ಮತ್ತು ಕುಟುಂಬದ ಸದಸ್ಯರು ತನ್ನ ವಕೀಲರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ರಾಯ್ ಬರೇಲ್ ಬಳಿ ಬೃಹತ್ ಟ್ರಕ್ ಒಂದು ಅತೀ ವೇಗವಾಗಿ ಬಂದು ಇವರ ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಸಂತ್ರಸ್ತೆಯ ಇಬ್ಬರು ಚಿಕ್ಕಮಂದಿರು ಮೃತಪಟ್ಟಿದ್ದರು ಮತ್ತು ಸಂತ್ರಸ್ತೆ ಮತ್ತು ವಕೀಲರು ಗಂಭೀರವಾಗಿ ಗಾಯಗೊಂಡಿದ್ದರು.

- Advertisement -


ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಬಿಜೆಪಿ ಉಚ್ಛಾಟಿತ ಶಾಸಕ ಕುಲ್ ದೀಪ್ ಸಿಂಗ್ ಸೆಂಗರ್ ಮತ್ತು ಇತರ 9 ಮಂದಿ ಅಪಘಾತ ಪಿತೂರಿ ನಡೆಸಿ ಕೊಲೆ ನಡೆಸಿದ್ದಾರೆ ಎಂದು ಸಂತ್ರಸ್ತೆ ಕುಟುಂಬದ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು.


ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ದೆಹಲಿ ನ್ಯಾಯಾಲಯ ಕುಲ್ ದೀಪ್ ಸಿಂಗ್, ಟ್ರಕ್ ಚಾಲಕ ಮತ್ತು ಕ್ಲೀನರ್ ಅವರು ಪಿತೂರಿ ನಡೆಸಿ ಕೊಲೆ ನಡೆಸಿರುವುದಕ್ಕೆ ಯಾವುದೇ ಸಾಕ್ಷ್ಯ ಲಭಿಸಿಲ್ಲ. ಮಾತ್ರವಲ್ಲದೇ ಟ್ರಕ್ ಚಾಲಕನ ನಿರ್ಲಕ್ಷತೆಯಿಂದ ಜೀವ ಹಾನಿಯಾಗಿದೆಯೆಂದು ನ್ಯಾಯಾಲಯ ಜುಲೈ 31 ರಂದು ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. 2017 ರಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲ್ ದೀಪ್ ಸಿಂಗ್ ಅವರು 2019 ರಂದು ಜೀವಾವಧಿ ಶಿಕ್ಷೆ ಮತ್ತು ಸಂತ್ರಸ್ತೆಯ ತಂದೆಯ ಕೊಲೆ ಪ್ರಕರಣದಲ್ಲಿ ಸೆಂಗರ್ ಮತ್ತು ಸಂಗಡಿಗರು 2020 ರಿಂದ 10 ವರ್ಷಗಳ ಕಠಿಣ ಶಿಕ್ಷೆಗೆ ಒಳಗಾಗಿದ್ದರು.

Join Whatsapp