‘ಶಾಲಾ ಮಕ್ಕಳ ಸಮವಸ್ತ್ರ ಕಡ್ಡಾಯ ಬೇಡ’ : ಕೇಂದ್ರ ಸರಕಾರ

Prasthutha|

- Advertisement -

ನವದೆಹಲಿ: ದೇಶದಲ್ಲಿ ತಾಪಮಾನವು ತೀರಾ ಹೆಚ್ಚಿದ್ದು ಬಿಸಿಲಿನ ಅಡ್ಡ ಪರಿಣಾಮಗಳಿಂದ ಕಾಪಾಡಲು ಶಾಲಾ ಸಮಯದಲ್ಲಿ ಬದಲಾವಣೆ, ಸಮವಸ್ತ್ರ ಸಡಿಲಿಕೆ ಸೇರಿದಂತೆ ಕೆಲವು ಮಾರ್ಪಾಡು ಮಾಡಿಕೊಳ್ಳುವಂತೆ ಕೇಂದ್ರ ಶಿಕ್ಷಣ ಸಚಿವಾಲಯವು ರಾಜ್ಯಗಳಿಗೆ ಸಲಹೆ ನೀಡಿದೆ.

ಭಾರತದ ಹಲವು ರಾಜ್ಯಗಳಲ್ಲಿ ಉಷ್ಣಾಂಶ ಪ್ರಮಾಣ 45 ಡಿ.ಸೆ.ಗಿಂತ ಹೆಚ್ಚಿದ್ದು, ಶಾಲಾ ಸಮವಸ್ತ್ರ ಕಡ್ಡಾಯ ಮಾಡದಂತೆ ಕೇಂದ್ರ ಸರ್ಕಾರ ಈ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಈ ಸಲಹೆಗಳನ್ನು ನೀಡಿದೆ.

- Advertisement -

ಇನ್ನು ಶಾಲಾ ಸಮಯ ಬದಲಾವಣೆ ಮಾಡಿ ಬೆಳಗ್ಗೆ 7 ಗಂಟೆಯಿಂದ ಶಾಲೆ ಆರಂಭಿಸಿ ಮಧ್ಯಾತ್ನದ ಒಳಗೆ ಮುಗಿಸುವಂತೆ ಸಲಹೆ ನೀಡಿದ್ದು, ಸಮವಸ್ತ್ರ ಕಡ್ಡಾಯ ಬೇಡ, ಅನುಕೂಲ ಆಗುವ ಬಟ್ಟೆ ಧರಿಸಲು ಅವಕಾಶ ನೀಡಬೇಕು ಎಂದಿದೆ.ಚರ್ಮದ ಶೂ ಬದಲು ಕ್ಯಾನ್ವಾಸ್ ಶೂ ಬಳಕೆಗೆ ಅವಕಾಶ ಕೊಡಬೇಕು. ಹೆಚ್ಚು ನೀರು ಕುಡಿಯುವಂತೆ ಮಕ್ಕಳಿಗೆ ಶಿಕ್ಷಕರು ಅರಿವು ಮೂಡಿಸಬೇಕು ಎಂದು ಸೂಚನೆಯಲ್ಲಿ ತಿಳಿಸಿದೆ.



Join Whatsapp