ಕಡಬ: ಮರದ ಕೊಂಬೆ ಬಿದ್ದು ಪವಾಡಸದೃಶವಾಗಿ ಯುವಕ ಪಾರು

Prasthutha|

ಕಡಬ: ಕಡಬದ ಮುಖ್ಯಪೇಟೆಯಲ್ಲಿ ಯುವಕನ ಮೇಲೆ ಬೃಹತ್ ಮರದ ಕೊಂಬೆಯೊಂದು ಮುರಿದು ಬಿದ್ದಿದ್ದು ಪವಾಡಸದೃಶವಾಗಿ ಯುವಕ ಪ್ರಾಣಪಾಯದಿಂದ ಪಾರಾಗಿದ್ದಾನೆ.

- Advertisement -

ಕಡಬ ನಿವಾಸಿ ಸುನಿಲ್ ಮೇಲೆ ಮರದ ಕೊಂಬೆ ಬೀಳುವ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದೃಷ್ಟ ಎಂಬಂತೆ ಯುವಕ ಬದುಕುಳಿದಿದ್ದಾನೆ.

ಕಡಬದ ಸ್ವಸ್ತಿಕ್ ಪೈಪ್ ಅಂಗಡಿಯ ಮುಂಭಾಗದಲ್ಲಿ ನಿಂತಿದ್ದ ಲಾರಿಯೊಂದಕ್ಕೆ ಹಿಂಬದಿಗೆ ಬರಲು ಸೈಡ್ ಹೇಳುತ್ತಿದ್ದ ವೇಳೆಯಲ್ಲಿ ಅಲ್ಲೇ ಪಕ್ಕದಲ್ಲಿದ್ದ ಮರದಿಂದ ಒಣಗಿದ ಕೊಂಬೆಯೊಂದು ಮುರಿದು ಸುನಿಲ್ ಮೇಲೆ ಬಿದ್ದಿದೆ. ಕೊಂಬೆ ಬಿದ್ದ ತಕ್ಷಣ ಸಣ್ಣಪ್ರಮಾಣದಲ್ಲಿ ಗಾಯಗೊಂಡ ಸುನಿಲ್ ಅವರನ್ನು ಸ್ಥಳೀಯರು ಉಪಚರಿಸಿ, ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

- Advertisement -

ಅದೃಷ್ಟವಶಾತ್ ಯುವಕನಿಗೆ ಯಾವುದೇ ರೀತಿಯಲ್ಲಿ ಹೆಚ್ಚಿನ ಅಪಾಯ ಸಂಭವಿಸಿಲ್ಲ.

Join Whatsapp