ಬೇಜವಾಬ್ದಾರಿ ಹೇಳಿಕೆ ನೀಡಿ, ವಿದೇಶಿ ಸಂಬಂಧ ಹಾಳು ಮಾಡಬೇಡಿ: ಬಾಬಾ ರಾಮದೇವ್ ಗೆ ಹೈಕೋರ್ಟ್ ಎಚ್ಚರಿಕೆ

Prasthutha|

ನವದೆಹಲಿ: ಯುಎಸ್ ಅಧ್ಯಕ್ಷ ಜೋ ಬೈಡನ್ ಪಡೆದುಕೊಂಡ ಕೋವಿಡ್ -19 ಲಸಿಕೆಯ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದ ಬಾಬಾ ರಾಮದೇವ್ ವಿರುದ್ಧ ದೆಹಲಿ ಹೈಕೋರ್ಟ್ ಆಕ್ರೋಶಗೊಂಡಿದೆ. ನಿಮ್ಮ ಬೇಜವಾಬ್ದಾರಿ ಹೇಳಿಕೆಗಳು ವಿದೇಶಿ ಸಂಬಂಧಗಳನ್ನು ಹಾಳು ಮಾಡುವ ಸಾಧ್ಯತೆಯಿದೆ . ಆದ್ದರಿಂದ ಅಧಿಕೃತವಲ್ಲದ ಹೇಳಿಕೆ ನೀಡಬೇಡಿ ಎಂದು ಎಚ್ಚರಿಕೆ ನೀಡಿದೆ.

- Advertisement -


ಕೋವಿಡ್ ಲಸಿಕೆ ಪಡೆದ ಹೊರತಾಗಿಯೂ ಯುಎಸ್ ಅಧ್ಯಕ್ಷರಿಗೆ ಮೂರನೇ ಬಾರಿಗೆ ಕೋವಿಡ್ ಪಾಸಿಟಿವ್ ಬಂದಿದೆ, ಬೈಡನ್ ಗೆ ಪಾಸಿಟಿವ್ ಬಂದಿರುವುದು ವೈದ್ಯಕೀಯ ವಿಜ್ಞಾನದ ವೈಫಲ್ಯವನ್ನು ತೋರಿಸುತ್ತದೆ. . ಅವರು ಇನ್ನೂ ಶೈಶವಾವಸ್ಥೆಯಲ್ಲಿದ್ದಾರೆ ಎಂದು ರಾಮದೇವ್ ಹೇಳಿಕೆ ನೀಡಿದ್ದರು. ತನ್ನ ಸ್ವಂತ ಪ್ರೊಡೆಕ್ಟ್ ‘ಕೊರೊನಿಲ್’ ಅನ್ನು ಉತ್ತೇಜಿಸುವ ಭರದಲ್ಲಿ ಅಲೋಪಥಿಕ್ ಔಷಧ ಮತ್ತು ಇನ್ನಿತರ ವೈದ್ಯರ ವಿರುದ್ಧ ಹೇಳಿಕೆ ನೀಡಿದ್ದರು.

ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ವೈದ್ಯರ ತಂಡವೊಂದು ರಾಮದೇವ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ , ಅಧಿಕೃತವಲ್ಲದ ನಿಮ್ಮ ಮಾತ್ರೆಯನ್ನು ಉತ್ತೇಜಿಸಲು ಬೇಕಾಗಿ ವಿಶ್ವ ನಾಯಕರ ಬಗೆಗಿನ ಬೇಜವಾಬ್ದಾರಿ ಹೇಳಿಕೆ ನೀಡಬಾರದು, ಅದು ವಿದೇಶಿ ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದೆ

Join Whatsapp