ಹಿಂದಿ ಹೇರಿಕೆ ಮಾಡಿ ಮತ್ತೆ ಭಾಷಾ ಯುದ್ಧ ಮಾಡಿಸಬೇಡಿ: ಎಂ.ಕೆ.ಸ್ಟಾಲಿನ್

Prasthutha|

ಚೆನ್ನೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಂಸದೀಯ ಸಮಿತಿಯು ಎಲ್ಲಾ ಕೇಂದ್ರೀಯ ಸಂಸ್ಥೆಗಳಲ್ಲಿ ಹಿಂದಿಯನ್ನು ಶಿಫಾರಸು ಮಾಡಿದೆ ಎಂಬ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಹಿಂದಿ ಹೇರುವ ಮೂಲಕ ಮತ್ತೊಂದು ಭಾಷಾ ಯುದ್ಧವನ್ನು ಒತ್ತಾಯಿಸಬೇಡಿ ಎಂದು ಹೇಳಿದ್ದಾರೆ.

- Advertisement -

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧ್ಯಕ್ಷರಾಗಿ ತಮ್ಮ ಎರಡನೇ ಅವಧಿಯನ್ನು ಪ್ರಾರಂಭಿಸಿದ ಸ್ಟಾಲಿನ್, ಅಮಿತ್ ಶಾ ಅಧ್ಯಕ್ಷತೆಯ ಭಾಷಾ ಸಮಿತಿಯು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ವರದಿ ಬಗ್ಗೆ ಪ್ರತಿಕ್ರಯಿಸಿದ್ದು, ಹಿಂದಿಯನ್ನು ಕಡ್ಡಾಯಗೊಳಿಸುವುದು ಹಿಂದಿ ಭಾಷಿಕರು ಮಾತ್ರ ಭಾರತದ ನಿಜವಾದ ಪ್ರಜೆಗಳು ಮತ್ತು ಇತರ ಭಾಷೆಗಳನ್ನು ಮಾತನಾಡುವವರು ಎರಡನೇ ದರ್ಜೆಯ ನಾಗರಿಕರು ಎಂದು ಹೇಳುವಂತಿದೆ. ಇದು ವಿಭಜಕ ಸ್ವರೂಪದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಹಿಂದಿಯನ್ನು ಹೇರಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವ ಪ್ರಯತ್ನಗಳನ್ನು ಕೈಬಿಡಬೇಕು ಮತ್ತು ಅದರ ಬದಲು ಭಾರತದ ಏಕತೆಯನ್ನು ಎತ್ತಿಹಿಡಿಯಬೇಕು ಎಂದು ಅವರು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು.

- Advertisement -

ಹಿಂದಿ ಮಾತನಾಡುವವರಿಗಿಂತ ಇತರ ಭಾಷೆಗಳನ್ನು ಮಾತನಾಡುವ ಜನರ ಸಂಖ್ಯೆ ಹೆಚ್ಚಿದೆ. ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ತಮಿಳು ಸೇರಿದಂತೆ 22 ಭಾಷೆಗಳು ಸಮಾನ ಹಕ್ಕುಗಳಿಗೆ ಅರ್ಹವಾಗಿವೆ. ಆದ್ದರಿಂದ ಎಲ್ಲಾ ಭಾಷೆಗಳನ್ನು ಕೇಂದ್ರ ಸರ್ಕಾರದ ಅಧಿಕೃತ ಭಾಷೆಗಳಾಗಿ ಮಾಡಲು ಶ್ರಮಿಸಬೇಕು ಎಂದು ಸ್ಟಾಲಿನ್ ಹೇಳಿದರು.

ಇಂತಹ ಪರಿಸ್ಥಿತಿಯಲ್ಲಿ, ಹಿಂದಿಯನ್ನು ಭಾರತದ ಸಾಮಾನ್ಯ ಭಾಷೆಯನ್ನಾಗಿ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿಯು ಶಿಫಾರಸು ಮಾಡುವ ಅಗತ್ಯವೇನಿದೆ? ಹಿಂದಿಗೆ ಆದ್ಯತೆ ನೀಡಲು ಯೂನಿಯನ್ ನೇಮಕಾತಿ ಪರೀಕ್ಷೆಗಳಲ್ಲಿ ಇಂಗ್ಲಿಷ್ ಭಾಷೆಯ ಪ್ರಶ್ನೆ ಪತ್ರಿಕೆಯನ್ನು ನಿಲ್ಲಿಸಲು ಏಕೆ ಶಿಫಾರಸು ಮಾಡಲಾಗಿದೆ? ಸಂಸತ್ತಿನಲ್ಲಿ ರಾಜಕೀಯ ಘೋಷಣೆಯಾಗಿ ‘ಭಾರತ್ ಮಾತಾ ಕಿ ಜೈ’ ಎಂದು ಕೂಗುವಾಗ ಹಿಂದಿಗೆ ಅನಗತ್ಯ, ಅನ್ಯಾಯದ ಅನುಕೂಲವನ್ನು ಒದಗಿಸುವುದು ಮತ್ತು ಇತರ ಭಾರತೀಯ ಭಾಷೆಗಳ ವಿರುದ್ಧ ತಾರತಮ್ಯ ಮಾಡುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಸ್ಟಾಲಿನ್ ಟೀಕಿಸಿದರು.

Join Whatsapp