ಚಿಲುಮೆ ಸಂಸ್ಥೆಯಲ್ಲಿ ಲೆಟರ್ ಹೆಡ್, ಚೆಕ್ ದೊರಕಿದ ವಿಚಾರವಾಗಿ ಅಶ್ವತ್ಥನಾರಾಯಣರ ವಿಚಾರಣೆ ಮಾಡುವ ದಮ್ಮು, ತಾಕತ್ತು ಇಲ್ಲವೇ: ಕಾಂಗ್ರೆಸ್

Prasthutha|

ಬೆಂಗಳೂರು: ಚಿಲುಮೆ ಸಂಸ್ಥೆಯಲ್ಲಿ ಲೆಟರ್ ಹೆಡ್, ಚೆಕ್ ದೊರಕಿದ ವಿಚಾರವಾಗಿ ಸಚಿವ ಸಚಿವ ಅಶ್ವತ್ಥನಾರಾಯಣ ಅವರ ವಿಚಾರಣೆ ಮಾಡುವ ದಮ್ಮು, ತಾಕತ್ತು ಇಲ್ಲವೇ ಬಿ.ಎಸ್.ಬೊಮ್ಮಾಯಿ ಅವರೇ? ಸಚಿವರಿಗೂ ಚಿಲುಮೆಗೂ ಏನು ಸಂಬಂಧ? ಬೇರೆಲ್ಲವನ್ನೂ ಪುಂಖಾನುಪುಂಖವಾಗಿ ಮಾತಾಡುವ ಮುಖ್ಯಮಂತ್ರಿಗಳು ಈ ಬಗ್ಗೆ ಮೌನ ಮುರಿಯದಿರುವುದೇಕೆ? ಸಿಎಂ ಕೂಡ ಈ ಅಕ್ರಮದಲ್ಲಿ ಪಾಲು ಹೊಂದಿರುವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

- Advertisement -

ರಾಜಕೀಯ ಒತ್ತಡದಿಂದ ಚಿಲುಮೆ ಸಂಸ್ಥೆಗೆ ಸಹಕರಿಸಿದ್ದೆವು ಎಂದು ಅಧಿಕಾರಿಗಳು ಹೇಳಿದ್ದಾರೆ. ಒತ್ತಡ ಹಾಕಿದ ರಾಜಕೀಯದವರು ಯಾರು? ಅವರ ಹಿತಾಸಕ್ತಿ ಏನಿತ್ತು? ಚಿಲುಮೆ ಸಂಸ್ಥೆಯ ಹಣದ ಮೂಲ ಯಾವುದು? ಚೆಕ್, ಲೆಟರ್ ಹೆಡ್ ಸಿಕ್ಕಿರುವ ಸಂಗತಿಯನ್ನು ಬಚ್ಚಿಡುತ್ತಿರುವುದೇಕೆ? ಅಕ್ರಮಗಳ ಮಹಾಪೋಷಕ ಬೊಮ್ಮಾಯಿಯವರು ಜನತೆಗೆ ಉತ್ತರಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.



Join Whatsapp