ಹಿಂದೂ ರಾಷ್ಟ್ರದ ಕಾರ್ಯಕ್ರಮಗಳಿಗೆ ಅನುಮತಿ ನೀಡದಂತೆ SDPI ಒತ್ತಾಯ

Prasthutha|

►’ಕಪೋಲಕಲ್ಪಿತ ಇಸ್ಲಾಂ ರಾಷ್ಟ್ರದ ಆರೋಪ ಹೊರಿಸುವವರಿಗೆ ಹಿಂದೂ ರಾಷ್ಟ್ರ ಸಭೆ ಯಾಕಾಗಿ ಕಾಣುತ್ತಿಲ್ಲ’

- Advertisement -

ಮಂಗಳೂರು: ಜಿಲ್ಲೆಯ ಹಲವೆಡೆ ಹಲವಾರು ಸಮಯಗಳಿಂದ ಸಂಘಪರಿವಾರದ ಅಂಗ ಸಂಸ್ಥೆ ಯಾಗಿರುವ ಹಿಂದು ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆ ಹೆಸರಿನಲ್ಲಿ ಹಿಂದು ರಾಷ್ಟ್ರ ಜಾಗೃತಿ ಸಭೆ ಎಂಬ ರಾಷ್ಟ್ರ ವಿರೋಧಿ ಬ್ಯಾನರ್ ಅಳವಡಿಸುವವರ ವಿರುದ್ಧ ಮತ್ತು ಕಾರ್ಯಕ್ರಮ ಆಯೋಜಿಸುವವರ ವಿರುದ್ಧ ಕ್ರಮ ಯಾಕಿಲ್ಲ ಎಂದು ಎಸ್‌ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಮತ್ತು ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಯಾವುದೇ ಒಂದು ಧರ್ಮದ ಪರವಾದ ರಾಷ್ಟ್ರದ ಪರಿಕಲ್ಪನೆ ಹೊಂದುವುದು ದೇಶದ್ರೋಹದ ಅಪರಾಧವಾಗಿದೆ. ಆದರೆ ಸಂಘಪರಿವಾರ ಸಂಘಟನೆಗಳು ನಿರಂತರವಾಗಿ ರಾಜ್ಯದಲ್ಲಿ ಮತ್ತು ದ.ಕ ಜಿಲ್ಲೆಯ ಹಲವು ಕಡೆಗಳಲ್ಲಿ ಹಿಂದು ರಾಷ್ಟ್ರ ಜಾಗೃತಿ ಸಭೆ ಎಂಬ ಹೆಸರಿನಲ್ಲಿ ಪ್ರಮುಖ ನಗರಗಳಲ್ಲಿ, ಜಂಕ್ಷನ್ ಗಳಲ್ಲಿ, ಖಾಸಗಿ ವಾಹನಗಳ ಮೇಲೆ ದೇಶದ್ರೋಹದ ಬ್ಯಾನರ್ ಅಳವಡಿಸುತ್ತಿದ್ದರೂ ಪೋಲಿಸ್ ಇಲಾಖೆ ಮತ್ತು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ನಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸಿ ಸಂಘಪರಿವಾರದ ದೇಶದ್ರೋಹದ ಕೃತ್ಯಕ್ಕೆ ಪ್ರತ್ಯಕ್ಷವಾಗಿ ಬೆಂಬಲವಾಗಿ ನಿಂತಿರುವುದು ಖಂಡನೀಯ ಮತ್ತು ಸಂವಿಧಾನಕ್ಕೆ ಎಸಗುವ ಅಪಚಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಒಂದು ವೇಳೆ ಮುಸ್ಲಿಮ್ ಯುವಕರು ಯಾವುದಾದರೂ ಸಣ್ಣಪುಟ್ಟ ಪ್ರಕರಣಗಳಲ್ಲಿ ಸಿಕ್ಕಿಬಿದ್ದಾಗ ಅವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಯುಎಪಿಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿ ಪ್ರಕರಣವನ್ನು NIA ಗೆ ವಹಿಸಿ ವಿಚಾರಣೆಯ ನೆಪದಲ್ಲಿ, ಹಲವಾರು ನಿರಪರಾಧಿ ಮುಸ್ಲಿಂ ಯುವಕರಿಗೆ ಕಿರುಕುಳ ಮತ್ತು ದೌರ್ಜನ್ಯ ನಡೆಸಿ, ಇವರು ಇಸ್ಲಾಂ ರಾಷ್ಟ್ರ ಮಾಡಲು ಹೊರಟಿದ್ದರು ಎಂದು ಸುಳ್ಳಾರೋಪ ಹೊರಿಸಿ, ಹಲವು ವರ್ಷಗಳ ಕಾಲ ನಿರಪರಾಧಿಗಳು ಜೈಲಲ್ಲಿ ಕೊಳೆಯುವಂತೆ ಮಾಡುವ ಸರ್ಕಾರದ ಕೈಗೊಂಬೆಯಾಗಿರುವ ಏಜೆನ್ಸಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಹಿಂದು ರಾಷ್ಟ್ರದ ಬ್ಯಾನರ್ ಯಾಕಾಗಿ ಕಾಣುತ್ತಿಲ್ಲ?, ಇಸ್ಲಾಂ, ಕ್ರೈಸ್ತ ರಾಷ್ಟ್ರದ ಪರಿಕಲ್ಪನೆ ದೇಶದ್ರೋಹ ಕೃತ್ಯವಾಗಿರುವಾಗ ಹಿಂದು ರಾಷ್ಟ್ರದ ಪರಿಕಲ್ಪನೆ ಯಾಕಾಗಿ ನಿಮಗೆ ದೇಶದ್ರೋಹವಾಗಿ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೋಲಿಸ್ ಇಲಾಖೆ ಮತ್ತು ಜಿಲ್ಲಾಡಳಿತ ಕೂಡಲೇ ದೇಶದ್ರೋಹದ ಬ್ಯಾನರ್ ಗಳನ್ನು ತೆರವುಗೊಳಿಸಿ ಅದನ್ನು ಅಳವಡಿಸಿದವರ ವಿರುದ್ಧ ದೇಶದ್ರೋಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು, ಹಾಗೂ ಮುಂದಿನ ದಿನಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಸೀಮಿತವಾದ ರಾಷ್ಟ್ರದ ಪರಿಕಲ್ಪನೆಯ ಬಗ್ಗೆ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಬಾರದು ಎಂದು ಅವರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.

Join Whatsapp