ಬ್ರಿಟಿಷರಿಗಿಂತಲೂ ಕೆಟ್ಟವರಾಗಬೇಡಿ : ಮೋದಿ ಸರಕಾರಕ್ಕೆ ಕೇಜ್ರಿವಾಲ್ ಎಚ್ಚರಿಕೆ | ಕೃಷಿ ಕಾನೂನು ಪ್ರತಿ ಹರಿದು ಹಾಕಿದ ದೆಹಲಿ ಸಿಎಂ

Prasthutha|

ನವದೆಹಲಿ : ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ಕಾನೂನಿನ ಪ್ರತಿಗಳನ್ನು ಹರಿದು ಹಾಕಿದ್ದಲ್ಲದೆ, “ಬ್ರಿಟಿಷರಿಗಿಂತಲೂ ಕೆಟ್ಟವರಾಗಬೇಡಿ” ಎಂದು ಕಿಡಿಗಾರಿದ್ದಾರೆ.

- Advertisement -

“ನಾನು ಇಲ್ಲಿ ವಿಧಾನಸಭೆಯಲ್ಲಿ ಮೂರು ಕೃಷಿ ಕಾನೂನುಗಳನ್ನು ಹರಿದು ಹಾಕುತ್ತಿದ್ದೇನೆ ಮತ್ತು ಬ್ರಿಟಿಷರಿಗಿಂತಲೂ ಕೆಟ್ಟವರಾಗಬೇಡಿ ಎಂದು ಕೇಂದ್ರವನ್ನು ಒತ್ತಾಯಿಸುತ್ತೇನೆ. ಕೊರೊನ ಪಿಡುಗಿನ ಸಂದರ್ಭದಲ್ಲಿ ಸಂಸತ್ತಿನಲ್ಲಿ ಕೃಷಿ ಕಾನೂನು ತರುವ ತುರ್ತು ಏನಿದೆ?” ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

“ಪ್ರತಿಯೊಬ್ಬ ರೈತನೂ ಭಗತ್ ಸಿಂಗ್ ಆಗಿದ್ದಾನೆ. ನಾವು ರೈತರಲ್ಲಿಗೆ ಹೋಗುತ್ತೇವೆ ಮತ್ತು ಕೃಷಿ ಮಸೂದೆಗಳ ಲಾಭವನ್ನು ವಿವರಿಸಲು ಯತ್ನಿಸುತ್ತೇವೆ ಎಂದು ಸರಕಾರ ಹೇಳುತ್ತಿದೆ. ತಮ್ಮ ಭೂಮಿಯನ್ನು ತೆಗೆದುಕೊಳ್ಳಲಾಗುವುದಿಲ್ಲವಾದುದರಿಂದ, ರೈತರಿಗೆ ಒಳ್ಳೆಯದಾಗಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಹೇಳುತ್ತಾರೆ. ಇದೇ ಆ ಲಾಭವೇ?” ಎಂದು ಕೇಜ್ರಿವಾಲ್ ಕೇಳಿದ್ದಾರೆ.

- Advertisement -

ಪ್ರಧಾನಿ ನರೇಂದ್ರ ಮೋದಿ ಸರಕಾರದ ಮೂರು ನೂತನ ಕೃಷಿ ಕಾನೂನಗಳನ್ನು ವಿರೋಧಿಸಿ ಸಾವಿರಾರು ರೈತರು ದೆಹಲಿಯ ಕೊರೆವ ಚಳಿಯಲ್ಲೂ ಕಳೆದ 23 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.  



Join Whatsapp