ಸೌದಿ ಅರೇಬಿಯಾ: ಖಾಸಗಿ ಚಾಲಕರು, ಗೃಹ ಕಾರ್ಮಿಕರೊಳಗೊಂಡಂತೆ 5 ವೃತ್ತಿಗಳು ಕಾರ್ಮಿಕಾ ಸುಧಾರಣಾ ಕ್ರಮಗಳಿಂದ ಹೊರಗೆ

Prasthutha|

ರಿಯಾದ್: ಉದ್ಯೋಗದಾತರು ಮತ್ತು ಉದ್ಯೋಗಿಗಳ ನಡುವಿನ ಒಪ್ಪಂದವನ್ನು ಅಭಿವೃದ್ಧಿಗೊಳಿಸುವ ಕಾರ್ಮಿಕ ಸುಧಾರಣಾ ಕ್ರಮಗಳಡಿ ಐದು ವೃತ್ತಿಗಳನ್ನು ಸೇರಿಸಲಾಗಿಲ್ಲ ಎಂದು ಸೌದಿ ಅರೇಬಿಯಾದ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಗುರುವಾರದಂದು ಪ್ರಕಟಿಸಿದೆ.

ಖಾಸಗಿ ಚಾಲಕರು, ಗೃಹ ರಕ್ಷಕರು, ಗೃಹ ಕಾರ್ಮಿಕರು, ಕುರುಬರು ಮತ್ತು ತೋಟಗಾರರು ಅಥವಾ ರೈತರು ಕಾರ್ಮಿಕ ಸುಧಾರಣಾ ಕ್ರಮಗಳಡಿ ಬರುವುದಿಲ್ಲ.

- Advertisement -

70 ವರ್ಷಗಳು ಹಳೆಯ ಪ್ರಾಯೋಜಕ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವುದಕ್ಕಾಗಿ ಕಾರ್ಮಿಕ ಸುಧಾರಣಾ ಕ್ರಮಗಳನ್ನು ಸಚಿವಾಲಯವು ಬುಧವಾರದಂದು ಪ್ರಕಟಿಸಿತ್ತು.

- Advertisement -