ಮಡಿಕೇರಿ: ಬೀದಿ ನಾಯಿಗಳಿಂದ ಪಾದಚಾರಿಗಳ ಮೇಲೆ ದಾಳಿ: ಇಬ್ಬರಿಗೆ ಗಾಯ

Prasthutha|

ಮಡಿಕೇರಿ: ಮಡಿಕೇರಿಯ ಕೆಲ ನಗರದಲ್ಲಿ ಬೀದಿ ನಾಯಿಗಳ ಹಾವಳಿಗಳು ಹೆಚ್ಚಾಗಿದೆ. ಕೆಲ ನಗರದ ಬಡಾವಣೆಗಳಲ್ಲಿ 20 ರಿಂದ 30 ನಾಯಿಗಳು ಗುಂಪು ಗುಂಪಾಗಿ ಒಟ್ಟಾಗುತ್ತಿದ್ದು ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಸಿವೆ. ಗಣಪತಿ ಬೀದಿಯ ರಸ್ತೆಯಲ್ಲಿ ಮದರಸಕ್ಕೆ ತೆರಳುತ್ತಿದ್ದ 7 ವರ್ಷದ ಬಾಲಕನ ಮೇಲೆ ನಾಯಿಗಳ ಗುಂಪು ದಾಳಿ ಮಾಡಿದೆ.ಬಾಲಕನ ಕೈಗೆ ನಾಯಿಗಳು ಕಚ್ಚಿದ ಪರಿಣಾಮ ತೀವ್ರ ರೀತಿಯ ಗಾಯಗಳಾಗಿದೆ.

- Advertisement -

ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿ ಕಾವೇರಿ ಹಾಲ್ ರಸ್ತೆಯಲ್ಲಿ ಗೂಡ್ಸ್ ಆಟೋ ಚಾಲಕರೊಬ್ಬರ ಮೇಲೆ ನಾಯಿಗಳು ದಾಳಿ ಮಾಡಿದೆ. ದಾಳಿಯಿಂದ ಚಾಲಕನಿಗೆ ತೀವ್ರ ಸ್ವರೂಪದ ಗಾಯಗಳಾಗಿದೆ. ಕೆಲವು ಕಡೆಗಳಲ್ಲಿ ದ್ವಿಚಕ್ರ ವಾಹನ ಚಾಲಕರ ಮೇಲೆ ನಾಯಿಗಳ ದಾಳಿಯಾಗುತ್ತಿದ್ದು, ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿದೆ.

ಬೀದಿನಾಯಿಗಳ ಹಾವಳಿ ಬಗ್ಗೆ ಕಳೆದ ಎರಡು ತಿಂಗಳಿನಿಂದ ನಗರಸಭೆಗೆ ದೂರು ನೀಡುತ್ತಿದ್ದರೂ, ಯಾವುದೇ ಸ್ಪಂದನೆ ದೊರೆಯುತ್ತಿಲ್ಲ ಎನ್ನಲಾಗುತ್ತಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Join Whatsapp