ಸ್ಮಾರ್ಟ್ ರೂಟ್ ಟೆಕ್ನಾಲಜೀಸ್ ನೂತನ ಮಳಿಗೆ ಪುತ್ತೂರಿನಲ್ಲಿ ನಾಳೆ ಉದ್ಘಾಟನೆ

Prasthutha|

ಪುತ್ತೂರು: ಸ್ಮಾರ್ಟ್ ರೂಟ್ ಟೆಕ್ನಾಲಜೀಸ್ ಸಂಸ್ಥೆಯ ನೂತನ ಹೋಲ್ ಸೇಲ್ ಮತ್ತು ರಿಟೇಲ್ ಮಳಿಗೆಯು ಪುತ್ತೂರಿನ ಸಿಟಿ ಸೆಂಟರ್ ಬಿಲ್ಡಿಂಗ್ ನಲ್ಲಿ ನವೆಂಬರ್ 4, ಗುರುವಾರದಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಮಾಲೀಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -


ಈ ನೂತನ ಮಳಿಗೆಯನ್ನು, ಅಲ್ ಇಹ್ ಸಾನ್ ಎಜುಕೇಷನಲ್ ಟ್ರಸ್ಟ್ ಮುಳೂರು ಅಧ್ಯಕ್ಷ ಅಸಯ್ಯದ್ ಕೆ. ಎಸ್. ಆಟಕೋಯ ತಂಗಳ್ ಕುಂಬೋಲ್ ಉದ್ಘಾಟಿಸಲಿದ್ದು, ಶಾಸಕರಾದ ಸಂಜೀವ ಮಠಂದೂರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪುತ್ತೂರು ನಗರ ಸಭಾ ಅಧ್ಯಕ್ಷ ಜೀವಂದರ್ ಜೈನ್, ಹೇಮನಾಥ ಶೆಟ್ಟಿ ಕಾವು, ಒಳಮೊಗ್ರು ಗ್ರಾಮ ಪಂಚಾಯತ್ ನ ಹಾಜಿ ಅಬ್ದುಲ್ ರಹಿಮಾನ್ ಅರಿಯಡ್ಕ, ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.


ಸ್ಮಾರ್ಟ್ ರೂಟ್ ಟೆಕ್ನಾಲಜೀಸ್ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಗ್ರಾಹಕರ ಬೇಡಿಕೆಗಳನ್ನು ಜಿಲ್ಲೆಯಾದ್ಯಂತ ಪೂರೈಸುತ್ತಿದ್ದು, ಪುತ್ತೂರು ವಿಭಾಗದ ಗ್ರಾಹಕರ ಅನುಕೂಲಕ್ಕಾಗಿ ನೂತನ ಮಳಿಗೆಯನ್ನು ಆರಂಭಿಸಲಾಗಿದೆ.
ನೂತನ ಮಳಿಗೆಯಲ್ಲಿ ಸೋಲಾರ್ ಸಿಸ್ಟಮ್ ನ ಪ್ರಾಡಕ್ಟ್ ಗಳು, ಸಿಸಿಟಿವಿ ಮತ್ತು ಸೆಕ್ಯೂರಿಟಿ ಸಿಸ್ಟಮ್ ನ ಪ್ರಾಡಕ್ಟ್ ಗಳ ಹೋಲ್ ಸೇಲ್ ಮತ್ತು ರಿಟೇಲ್ ಮಾರಾಟ ಮತ್ತು ಸೇವೆ ಲಭ್ಯವಿವೆ. ಇನ್ಸ್ಟಾಲೇಷನ್, ಸಪೋರ್ಟ್ ಮತ್ತು ಮೆಂಟೈನನ್ಸ್ ಮಾಡಿಕೊಡಲಾಗುವುದು. ಇತರೆ ಪ್ರಾಡಕ್ಟ್ಸ್ ಗಳಾದ, ಸೋಲಾರ್ ವಾಟರ್ ಹೀಟರ್, ಸೋಲಾರ್ ಲೈಟ್ಸ್, ಸೋಲಾರ್ ಇನ್ವರ್ಟರ್, ಬ್ಯಾಟರಿ ಸಹಿತ ಮತ್ತು ಬ್ಯಾಟರಿ ರಹಿತ ವಿದ್ಯುತ್ ಸ್ಥಾವರ ಅಳವಡಿಕೆ, ಸೋಲಾರ್ ಸಿಸಿಟಿವಿ, ವೈಫೈ ಮತ್ತು 4ಜಿ ಸಿಮ್ ಕ್ಯಾಮೆರಾ, ಬಯೋಮೆಟ್ರಿಕ್ ಅಟೆಂಡೆನ್ಸ್ ಮಷೀನ್, ಆಟೋಮ್ಯಾಟಿಕ್ ಗೇಟ್ಸ್, ಇಂಟರ್ ಕಾಂ ಟೆಲಿಫೋನ್, ಜಿ ಪಿ ಎಸ್ ವೆಹಿಕಲ್ ಟ್ರಾಕಿಂಗ್ ಸಿಸ್ಟಮ್ ಜೊತೆ ಹಲವು ಸೌಲಭ್ಯಗಳನ್ನು ಗ್ರಾಹಕರು ಈ ಮೂಲಕ ಪಡೆಯಬಹುದು ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp