ಹಿಜಾಬ್ ನಿಷೇಧದ ಆದೇಶ ಪದವಿ ಕಾಲೇಜುಗಳಿಗೆ ಅನ್ವಯವೇ ? ಇಲ್ಲಿದೆ ಮಾಹಿತಿ !

Prasthutha|

ಪಿಯು ಮಂಡಳಿಯ ಆದೇಶವನ್ನು ಪದವಿ ಕಾಲೇಜುಗಳ ವಿದ್ಯಾರ್ಥಿಗಳ ಮೇಲೆ ಹೇರಿಕೆ ?

- Advertisement -

ಬೆಂಗಳೂರು: ಹಿಜಾಬ್ ನಿಷೇಧದ ಕುರಿತು ಸರಕಾರ ಹೊರಡಿಸಿರುವ ಆದೇಶವನ್ನು ರಾಜ್ಯ ಹೈಕೋರ್ಟ್ ಎತ್ತಿಹಿಡಿದಿತ್ತು, ಅಲ್ಲದೇ ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ ಎಂದು ವಿಚಿತ್ರ ರೀತಿಯ ತೀರ್ಪನ್ನು ನೀಡಿತ್ತು. ಈ ಆದೇಶ ಪತ್ರದ ನೆಪವೊಡ್ಡಿ ರಾಜ್ಯದ ಬಹುತೇಕ ಪದವಿ ಕಾಲೇಜುಗಳು ಇಲ್ಲಿಯವೆರೆಗೆ ಹಿಜಾಬ್ ನೊಂದಿಗೆ ತರಗತಿ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದ ವಿದ್ಯಾರ್ಥಿಗಳನ್ನು ವಾಪಾಸ್ ಕಳುಹಿಸುತ್ತಿರುವ ಘಟನೆಗಳು ವರದಿಯಾಗುತ್ತಿದೆ, ಆದರೆ ಈ ಆದೇಶವು ನಿಜವಾಗಿಯೂ ಪದವಿ ಕಾಲೇಜುಗಳಿಗೆ ಅನ್ವಯವಾಗಲಿದೆಯೇ ?

ಸರಕಾರವು ಹೊರಡಿಸಿದ  ಈ ಆದೇಶವು ಪದವಿ ಕಾಲೇಜುಗಳಿಗೆ ಅನ್ವಯವಾಗುವುದೇ ಇಲ್ಲ. ಅಲ್ಲದೇ ಕೇವಲ ಪದವಿ ಕಾಲೇಜುಗಳಲ್ಲ, ಖಾಸಗಿ ಕಾಲೇಜುಗಳು, ವೃತ್ತಿಪರ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕಿಯರಿಗೂ ಹಾಗು ಸಿಬ್ಬಂದಿಗಳಿಗೂ ಈ ತೀರ್ಪು ಅನ್ವಯಿಸುವುದಿಲ್ಲ. ಪಿಯು ಕಾಲೇಜಿಗೆ ಸಂಬಂಧ ಪಟ್ಟಿರುವ ಆದೇಶವನ್ನು ಪದವಿ ಕಾಲೇಜುಗಳ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳ ಮೇಲೆ ಹೇರುತ್ತಿದೆ ಅಷ್ಟೇ !

- Advertisement -

ರಾಜ್ಯ ಹೈಕೋರ್ಟ್ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದರ ಮೇಲೆ ಸಂಪೂರ್ಣ ನಿಷೇಧವನ್ನು ವಿಧಿಸಿಲ್ಲ. 05.02.2022 ರ ಸರ್ಕಾರ ಹೊರಡಿಸಿರುವ ಆದೇಶವನ್ನು ಎತ್ತಿ ಹಿಡಿದಿದೆ . ಸರ್ಕಾರದ ಆ ಅದೇಶದ ಪ್ರಕಾರ, ಸರ್ಕಾರಿ ಶಾಲೆಗಳಲ್ಲಿ ರಾಜ್ಯ ಸರ್ಕಾರವು ಸಮವಸ್ತ್ರವನ್ನು ನಿಗದಿಪಡಿಸುತ್ತದೆ, ಖಾಸಗಿ ಶಾಲೆಗಳಲ್ಲಿ ಆಡಳಿತ ಮಂಡಳಿಯು ಸಮವಸ್ತ್ರವನ್ನು ನಿಗದಿಪಡಿಸುತ್ತದೆ, ಪಿ.ಯು ಮಂಡಳಿಯ ಅಡಿಯಲ್ಲಿ ಬರುವ ಪಿ.ಯು ಕಾಲೇಜುಗಳಲ್ಲಿ ಕಾಲೇಜಿನಲ್ಲಿ, ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಕಾಲೇಜು ಆಡಳಿತ ಮಂಡಳಿಯ ಮೇಲ್ವಿಚಾರಣಾ ಸಮಿತಿಯು ಸಮವಸ್ತ್ರವನ್ನು ನಿರ್ಧರಿಸುತ್ತದೆ ಎಂದು ಹೇಳಿದೆ.

ಪಿಯು ಕಾಲೇಜು ಅಭಿವೃದ್ಧಿ ಸಮಿತಿಯು ಸಮವಸ್ತ್ರವನ್ನು ನಿಗದಿಪಡಿಸಿದ್ದಲ್ಲಿ ಮತ್ತು ನಿರ್ದಿಷ್ಟವಾಗಿ ಹಿಜಾಬ್​ನ್ನು ನಿಷೇಧಿಸಿದರೆ ಮಾತ್ರವಷ್ಟೆ ತರಗತಿಗಳಲ್ಲಿ ಹಿಜಾಬ್ ಧರಿಸುವಂತಿಲ್ಲ, ಅಲ್ಲದೇ ಸಮಿತಿ ನಿರ್ಬಂಧನೆ ತರಗತಿಯೊಳಗಡೆ ಅನ್ವಯಾವಗುತ್ತದೆ, ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಅನ್ವಯವಾಗುವುದಿಲ್ಲ.



Join Whatsapp