ಫ್ಯಾನ್ ಕಳಚಿ ಬಿದ್ದು ಡಾಕ್ಟರ್ ಗೆ ಗಾಯ| ಕರ್ತವ್ಯದ ವೇಳೆ ಹೆಲ್ಮೆಟ್ ಧರಿಸಿ ವೈದ್ಯರಿಂದ ಪ್ರತಿಭಟನೆ

Prasthutha|

ಹೈದರಾಬಾದ್: ಸೀಲಿಂಗ್ ಫ್ಯಾನ್ ಕಳಚಿ ಬಿದ್ದು ಕರ್ತವ್ಯದಲ್ಲಿದ್ದ ಡಾಕ್ಟರೊಬ್ಬರು ಗಾಯಗೊಂಡಿರುವ ಘಟನೆಯನ್ನು ಖಂಡಿಸಿ ವೈದ್ಯರು ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಹೈದರಾಬಾದ್‌ನ ಉಸ್ಮಾನಿಯಾ ಜನರಲ್ ಆಸ್ಪತ್ರೆಯ ಚರ್ಮರೋಗ ವಿಭಾಗದ ವೈದ್ಯರ ತಲೆಗೆ ಸೀಲಿಂಗ್ ಫ್ಯಾನ್ ಕಳಚಿ ಬಿದ್ದು ಗಂಭೀರ ಗಾಯಗೊಂಡಿದ್ದು, ಈ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಹೆಲ್ಮೆಟ್ ಧರಿಸಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

- Advertisement -

ನಂತರ ವೈದ್ಯರ ತಂಡ ಆಸ್ಪತ್ರೆಯ ಅಧೀಕ್ಷಕರಿಗೆ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದೆ. ಇಂತಹ ಘಟನೆಗಳು ಮರುಕಳಿಸುವುದರಿಂದ ರೋಗಿಗಳ ಆರೈಕೆ ಮತ್ತು ಕಾರ್ಯಕ್ಷಮತೆಗೆ ಅಡ್ಡಿಯಾಗುತ್ತಿದೆ ಎಂದು ವೈದ್ಯರು ಆಸ್ಪತ್ರೆಯ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

Join Whatsapp