ರಾಮ್‌ ದೇವ್‌ ಅಲೋಪಥಿಕ್‌ ಹೇಳಿಕೆ | ಕ್ರಮ ಕೈಗೊಳ್ಳದ ಬಗ್ಗೆ ಆಕ್ರೋಶ; ಜೂ.1ರಂದು ಕರಾಳ ದಿನ ಆಚರಣೆಗೆ ಐಎಂಎ ಕರೆ

Prasthutha|

ನವದೆಹಲಿ : ಅಲೋಪಥಿಕ್‌ ವೈದ್ಯಕೀಯ ಪದ್ಧತಿ ಬಗ್ಗೆ ಯೋಗಗುರು ಬಾಬಾ ರಾಮ್‌ ದೇವ್‌ ಹೇಳಿಕೆಗೆ ಗರಂ ಆಗಿದ್ದ ಭಾರತೀಯ ವೈದ್ಯಕೀಯ ಸಂಘ ಇದೀಗ ಪ್ರತಿಭಟನೆಯ ಮೂಲಕ ತನ್ನ ಆಕ್ರೋಶ ಹೊರಹಾಕಲು ನಿರ್ಧರಿಸಿದೆ. ರಾಮ್‌ ದೇವ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಈಗಾಗಲೇ ಸರಕಾರಕ್ಕೆ ಪತ್ರ ಬರೆದಿದ್ದರೂ, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲವಾದ ಕಾರಣ, ಜೂ.1ರಂದು ಕರಾಳ ದಿನ ಆಚರಿಸಲು ಐಎಂಎ ನಿರ್ಧರಿಸಿದೆ.

- Advertisement -

ರಾಮ್‌ ದೇವ್‌ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರೂ, ಯಾವುದೇ ರೀತಿಯ ಕ್ರಮ ಕೈಗೊಳ್ಳಲಾಗಿಲ್ಲ. ಆದ್ಧರಿಂದ ದೇಶಾದ್ಯಂತ ಅಲೋಪಥಿಕ್‌ ವಿವಿಧ ವಿಭಾಗದ ವೈದ್ಯರು ಜೂ.1ರಂದು ಬಾಬಾ ರಾಮ್‌ ದೇವ್‌ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಜೊತೆಗೆ ಆ ದಿನವನ್ನು ಕರಾಳ ದಿನವೆಂದು ಪರಿಗಣಿಸುವುದಾಗಿ ಐಎಂಎ ತಿಳಿಸಿದೆ. ಆದರೆ ವೈದ್ಯಕೀಯ ಸೇವೆಗೆ ಯಾವುದೇ ಅಡ್ಡಿಯಿರುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಅಲೋಪಥಿಕ್‌ ವೈದ್ಯಕೀಯ ವ್ಯವಸ್ಥೆಯನ್ನು ಅವಿವೇಕಿ ಮತ್ತು ಅಸಮರ್ಪಕ ವಿಜ್ಞಾನ ಎಂದು ಬಾಬಾ ರಾಮ್‌ ದೇವ್‌ ಹೇಳಿರುವ ವೀಡಿಯೊವೊಂದು ವೈರಲ್‌ ಆಗಿತ್ತು.



Join Whatsapp