ಇಂದು ಫೆಲೆಸ್ತೀನ್; ನ್ಯಾಯ ಮತ್ತು ಶಾಂತಿಯ ಹಾದಿ ಕುರಿತು ಆನ್ ಲೈನ್ ಸಾರ್ವಜನಿಕ ಸಭೆ

Prasthutha|

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ‘ಫೆಲೆಸ್ತೀನ್; ನ್ಯಾಯ ಮತ್ತು ಶಾಂತಿಯ ಹಾದಿ’ ಕುರಿತ ಆನ್ ಲೈನ್ ಸಾರ್ವಜನಿಕ ಸಭೆ

- Advertisement -

ಮೇ 30, 2021, ಭಾನುವಾರ ಸಂಜೆ 7ರಿಂದ ರಾತ್ರಿ 9 ಗಂಟೆಯವರೆಗೆ (ಅಂತಾರಾಷ್ಟ್ರೀಯ ಕಾಲಮಾನ; ಮಧ್ಯಾಹ್ನ 1.30ರಿಂದ 3.30) ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ಒಎಂಎ ಸಲಾಂ ಉದ್ಘಾಟಿಸಲಿದ್ದು, ಫೆಲೆಸ್ತೀನಿಯನ್ನರ ಪರ ಬದಲಾದ ಸಾರ್ವಜನಿಕ ಅಭಿಪ್ರಾಯ ಎಂಬ ವಿಷಯದ ಕುರಿತು ಶಿಕ್ಷಣ ತಜ್ಞ ಮತ್ತು ಗಾಝಾ ರೈಟ್ಸ್ ಬ್ಯಾಕ್ ನ ಸಂಪಾದಕ ರೆಫಾತ್ ಅಲರೀಲ್ ಹಾಗೂ ಪ್ರಸ್ತುತ ಬಿಕ್ಕಟ್ಟನ್ನು ಫೆಲೆಸ್ತೀ ನ್ ಹೇಗೆ ಎದುರಿಸಿದೆ ಎಂಬುದರ ಕುರಿತು ಸಿಐಜಿಎ ನಿರ್ದೇಶಕರು  ಮತ್ತು ಇಸ್ತಾಂಬುಲ್ ಸಬಾಹತ್ತಿನ್ ಝೈಮ್ ಯೂನಿವರ್ಸಿಟಿಯ ಪಬ್ಲಿಕ್ ಅಫೇರ್ಸ್ ಪ್ರೊಫೆಸರ್ ಡಾ.ಸಮಿ ಅಲಿ ಏರಿಯನ್ ಮಾತನಾಡಲಿದ್ದಾರೆ.

- Advertisement -

ಫೆಲೆಸ್ತೀನಿಯನ್ನರ ಹೋರಾಟದಿಂದ ಜನಪರ ಚಳವಳಿಗಳು ಕಲಿಯಬೇಕಾದ ಪಾಠ ಎಂಬ ವಿಷಯವನ್ನು ಎನ್ ಸಿಎಚ್ಆರ್ ಒ  ಪ್ರಧಾನ ಕಾರ್ಯದರ್ಶಿ, ಪ್ರೊ.ಪಿ.ಕೋಯಾ ಮಂಡಿಸಲಿದ್ದಾರೆ. ಫೆಲೆಸ್ತೀನ್ ಗಾಗಿ ಅರಬ್-ಇಸ್ರೇಲ್ ಸಾಮಾನ್ಯ ಸ್ಥಿತಿಯೆಡೆಗೆ ಹಿಂದಿರುಗುವ ಪರಿಣಾಮ ಕುರಿತು ಗಾಝಾ ಇಸ್ಲಾಮಿಕ್ ಯೂನಿವರ್ಸಿಟಿ ಭಾಷಾಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಡಾ.ಮೊಶೀರ್ ಎ.ಅಮಿರ್ ಮಾತನಾಡಲಿದ್ದಾರೆ.

ಮಾಧ್ಯಮ ಮತ್ತು ಫೆಲೆಸ್ತೀನ್ ಉದ್ದೇಶ- ಮುಂದಿನ ಹಾದಿ ಕುರಿತು ಸಾಮಾಜಿಕ ಕಾರ್ಯಕರ್ತೆ ಮತ್ತು ಫ್ರೆಂಡ್ಸ್ ಆಫ್ ಫೆಲೆಸ್ತೀನ್ ನ ಪಿಆರ್ ಮತ್ತು ಮಾಧ್ಯಮ ಮುಖ್ಯಸ್ಥೆ ಲೀನ್ ಸಾಲಿಹ್ ವಿವರಿಸಲಿದ್ದಾರೆ. ಪಿಎಫ್ಐ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಕಾರ್ಯಕ್ರಮ ನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮವನ್ನು pfiofficial ಯೂಟ್ಯೂಬ್ ನಲ್ಲಿ ಹಾಗೂ popularfrontofindiaofficial ಫೇಸ್ ಬುಕ್ ನಲ್ಲಿ ನೇರವಾಗಿ ವೀಕ್ಷಿಸಬಹುದು.

Join Whatsapp