ಸರ್ಕಾರದಲ್ಲಿರುವವರು ದರೋಡೆಕೋರರು ಎನ್ನುವುದಕ್ಕೆ ಮಾಡಾಳ್ ಲಂಚ ಪ್ರಕರಣಕ್ಕಿಂತ ಬೇರೆ ಉದಾಹರಣೆ ಬೇಕೆ?: ಇಲ್ಯಾಸ್ ಮುಹಮ್ಮದ್

Prasthutha|

ಮಂಗಳೂರು: ಸರ್ಕಾರದಲ್ಲಿರುವವರು ದರೋಡೆಕೋರರು ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ? ಕಳೆದ ಹಲವು ದಶಕಗಳಿಂದ ಕರ್ನಾಟಕ ರಾಜ್ಯದಲ್ಲಿ ಇದೇ ನಡೆಯುತ್ತಿರುವುದು. ರಾಜ್ಯವನ್ನು ಪ್ರಗತಿಪಥದತ್ತ ಕೊಂಡೊಯ್ಯಲು ರಾಜ್ಯದ ಜನ ಪರ್ಯಾಯ ರಾಜಕೀಯ ಪಕ್ಷಗಳನ್ನು ಬೆಂಬಲಿಸುವ ಗಟ್ಟಿ ನಿರ್ಧಾರ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರ SDPI ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗನ ನಿವಾಸಗಳಲ್ಲಿ 6.10 ಕೋಟಿ ರೂ. ನಗದು ಪತ್ತೆಯಾದ ಸುದ್ದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಇಲ್ಯಾಸ್ ಮುಹಮ್ಮದ್ ತುಂಬೆ, ಸರ್ಕಾರದಲ್ಲಿರುವವರು ದರೋಡೆಕೋರರು ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ಎಂದು ಪ್ರಶ್ನಿಸಿದ್ದಾರೆ

Join Whatsapp