ಸರ್ಕಾರಿ ಸಮಾರಂಭದಲ್ಲಿ ಹಿಂದೂ ಧಾರ್ಮಿಕತೆಯ ಪೂಜೆಗೆ ಸಿದ್ಧತೆ: ಅರ್ಚಕರನ್ನು ವಾಪಸ್ ಕಳುಹಿಸಿದ ಡಿಎಂಕೆ ಸಂಸದ

Prasthutha|

ಚೆನ್ನೈ: ಸರ್ಕಾರೀ ಸಮಾರಂಭದ ಉದ್ಘಾಟನೆ ವೇಳೆ ಹಿಂದೂ ಸಂಪ್ರದಾಯದಂತೆ ಭೂಮಿ ಪೂಜೆಗೆ ಸಿದ್ಧತೆ ನಡೆಸುತ್ತಿದ್ದ ಅಧಿಕಾರಿಗಳನ್ನು ಡಿಎಂಕೆ ಸಂಸದ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಪೂಜೆಗೆಂದು ಬಂದಿದ್ದ ಪುರೋಹಿತರನ್ನೂ ವಾಪಸ್ ಕಳುಹಿಸಿರುವ ಘಟನೆ ತಮಿಳುನಾಡಿನ ಧರ್ಮಪುರಿಯಲ್ಲಿ ನಡೆದಿದೆ.

- Advertisement -

ದ್ರಾವಿಡರ ಸರ್ಕಾರ ಸರ್ವ ಧರ್ಮೀಯರ ಸರ್ಕಾರವಾಗಿದ್ದು ಬೇರೆ ಸರ್ಕಾರದ ರೀತಿ ಅಲ್ಲ ಎಂದು ಸಂಸದ ಡಾ. ಸೆಂತಿಲ್ ಕುಮಾರ್ ಇದೇ ಸಂದರ್ಭದಲ್ಲಿ ಹೇಳಿರುವುದು ವರದಿಯಾಗಿದೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ಧಾರ್ಮಿಕತೆಯನ್ನು ದೂರ ಇಟ್ಟಿದ್ದಕ್ಕಾಗಿ ನೆಟ್ಟಿಗರು ಪ್ರಶಂಸೆಯ ಪ್ರವಾಹವನ್ನೇ ಹರಿಸಿದ್ದಾರೆ.

ಹಿಂದೂ ಧರ್ಮದ ಆಧಾರದಲ್ಲಿ ಮಾತ್ರ ಪೂಜೆ ನಡೆಸಲು ನಿಮಗೆ ಅನುಮತಿ ನೀಡಿದವರು ಯಾರು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಸೆಂಥಿಲ್ ಮಸೀದಿಯ ಇಮಾಂ, ಚರ್ಚಿನ ಫಾದರ್ ಸೇರಿದಂತೆ ಎಲ್ಲರನ್ನೂ ಕರೆಯಿರಿ ಎಂದು ಹೇಳಿದ್ದು ಸ್ಥಳದಲ್ಲಿ ಇದ್ದ ಅರ್ಚಕನನ್ನು ತೆರಳುವಂತೆ ಸಂಸದರು ಹೇಳಿದ್ದಾರೆ.

- Advertisement -

ತಮಿಳುನಾಡಿನ ಧರ್ಮಪುರಿ ಕ್ಷೇತ್ರವನ್ನು 2019ರಿಂದ ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿರುವ ಡಾ. ಎಸ್. ಸೆಂಥಿಲ್ ಕುಮಾಎ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ.



Join Whatsapp