ಡಿಎಲ್, ಆರ್‌ಸಿ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ

Prasthutha|

ವಾಹನಗಳ ಚಾಲನಾ ಪರವಾನಗಿ, ಫಿಟ್ನೆಸ್ ಪ್ರಮಾಣಪತ್ರ, ನೋಂದಣಿ ಪ್ರಮಾಣ ಪತ್ರ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ದಾಖಲೆಗಳ ಮಾನ್ಯತೆಯನ್ನು ಜೂನ್ 30, 2021ರವರೆಗೂ ವಿಸ್ತರಿಸಿರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಕೊರೊನಾ ಕಾರಣದಿಂದಾಗಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.

- Advertisement -

ಡಿಎಲ್, ಪರವಾನಗಿ, ನೋಂದಣಿ, ಮರು ನೋಂದಣಿ ಹೀಗೆ ವಾಹನಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳ ಅವಧಿ ಮುಗಿದಿದ್ದರೂ ಆ ದಾಖಲೆಗಳನ್ನು ಜೂನ್ 31ರವರೆಗೂ ಮಾನ್ಯತೆ ನೀಡಿ ಎಂದು ಪ್ರತಿ ರಾಜ್ಯಗಳಿಗೂ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ನೀಡಿದೆ.

 ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿರುವ ಕಾರಣ ಈ ನಿರ್ಣಯ ತೆಗೆದುಕೊಂಡಿದ್ದು, ಫೆಬ್ರವರಿ 1, 2020ರ ಬಳಿಕ ಅವಧಿ ಮುಗಿದಿರುವ ಹಾಗೂ ಕೊರೊನಾ ಲಾಕ್‌ಡೌನ್ ಕಾರಣವಾಗಿ ಈ ದಾಖಲೆಗಳನ್ನು ನವೀಕರಣಗೊಳಿಸಲು ಸಾಧ್ಯವಾಗಿರದ ದಾಖಲೆಗಳನ್ನು ಜೂನ್ 30ರವರೆಗೂ ಅವಧಿ ವಿಸ್ತರಣೆ ಮಾಡಲು ಸೂಚಿಸಿದೆ.

- Advertisement -

ವಾಹನಕ್ಕೆ ಸಂಬಂಧಿಸಿದ ದಾಖಲೆಗಳ ಅವಧಿಯನ್ನು ವಿಸ್ತರಿಸಲಾಗಿದ್ದು, ಸಾರಿಗೆ ಸಂಬಂಧ ಸೇವೆಗಳಲ್ಲಿ ವ್ಯತ್ಯಯವಾಗಬಾರದು. ಇದರಿಂದ ಸಾರ್ವಜನಿಕರಿಗೆ, ಸಾರಿಗೆ ಸೇವೆ ಸಲ್ಲಿಸುವವರಿಗೆ ಯಾವುದೇ ಸಮಸ್ಯೆಯಾಗಬಾರದು ಎಂದು ಹೇಳಲಾಗಿದೆ. ಇದೇ ಕೊನೆಯ ನಿರ್ದೇಶನ ಎಂದೂ ಸಚಿವಾಲಯ ತಿಳಿಸಿದೆ



Join Whatsapp