ದೆಹಲಿ NCHRO ನಾಯಕ ಅಝೀಮ್ ಖಾನ್ ಗೆ ಚೂರಿ ಇರಿತ

Prasthutha|

ಹೊಸದಿಲ್ಲಿ : ದೆಹಲಿ NCHRO ಪ್ರಧಾನ ಕಾರ್ಯದರ್ಶಿ ಅಝೀಮ್ ಖಾನ್  ಗೆ ಚೂರಿ ಇರಿದು ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ. ಅವರನ್ನು ಚಿಕಿತ್ಸೆಗಾಗಿ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್ ಗೆ ವರ್ಗಾಯಿಸಲಾಗಿದೆ. ಒಬ್ಬ ವ್ಯಕ್ತಿಯ ಮೇಲೆ ಗುಂಪೊಂದು ಹಲ್ಲೆ ನಡೆಸುತ್ತಿದ್ದ ಸಂದರ್ಭ ದಾಳಿಗೊಳಗಾಗುತ್ತಿರುವ ಯುವಕನನ್ನು ರಕ್ಷಿಸಲು ಮುಂದಾದ ಅಝೀಮ್ ಖಾನ್ ಮೇಲೆ ದಾಳಿಕೋರರು ಚೂರಿ ಇರಿದು ಗಂಭೀರ ಗಾಯಗೊಳಿಸಿದ್ದಾರೆ. ನಂತರ ಅವರ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

- Advertisement -

ಅಝೀಮ್ ಖಾನ್ ಮೇಲೆ ದಾಳಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ NCHRO ದಕ್ಷಿಣ ದೆಹಲಿ ಡೆಪ್ಯೂಟಿ ಕಮೀಷನರ್‌ಗೆ ದೂರು ನೀಡಿದೆ. ಘಟನೆಯ ಬಗ್ಗೆ ಜಾಮಿಯಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಈವರೆಗೆ ಯಾರನ್ನೂ ಬಂಧಿಸಿಲ್ಲ.

“ಒಬ್ಬರ ಮೇಲೆ ದಾಳಿ ನಡೆಸಿ  ಗಾಯಗೊಳಿಸಿದ ಆರೋಪಿಗಳು ಮುಕ್ತವಾಗಿ ಓಡಾಟ ನಡೆಸಲು ಸಾಧ್ಯವಾಗುತ್ತದೆ ಎಂಬುದು ಆಘಾತಕಾರಿಯಾಗಿದೆ. ಅಝೀಂ ಖಾನ್ ಮೇಲೆ ದಾಳಿ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು NCHRO ದೆಹಲಿ ಘಟಕದ ಅಧ್ಯಕ್ಷ ಅಡ್ವ. ಅಮಿತ್ ಶ್ರೀವಾಸ್ತವ ಒತ್ತಾಯಿಸಿದ್ದಾರೆ.

- Advertisement -