ಡಿ.ಕೆ.ಸುರೇಶ್-ಅಶ್ವಥ್ ನಾರಾಯಣ ನಡುವೆ ಜಟಾಪಟಿ ಪ್ರಕರಣ: ಎಫ್ ಐಆರ್ ದಾಖಲಿಸಿದ ಪೊಲೀಸರು !

Prasthutha|

ಬೆಂಗಳೂರು: ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಅಶ್ವಥ ನಾರಾಯಣ ನಡುವಿನ ಜಟಾಪಟಿಗೆ ಸಂಬಂಧಿಸಿದಂತೆ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್ ​ಐಆರ್​ ದಾಖಲಾಗಿವೆ.

- Advertisement -

ರಾಂಪುರ ನಾಗೇಶ್, ಕೋಟೆ ಕುಮಾರ , ಗುಡ್ಡೆ ವೆಂಕಟೇಶ್, ಗೌಸ್ ಪಾಷಾ, ಗೋವಿಂದಯ್ಯ ವಿರುದ್ಧ ಎಫ್ ​ಐಆರ್​ ದಾಖಲಿಸಲಾಗಿದೆ. ಇವರು ಪೂರ್ವ ಯೋಜಿತರಾಗಿ ಸಂಘಟಿತರಾಗಿ ಕಾರ್ಯಕ್ರಮದ ಸ್ಥಳಕ್ಕೆ ಬಂದಿದ್ದರು. ಸಂಸದರಿಂದ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿಸಲಿಲ್ಲ ಅಂತ ಧಿಕ್ಕಾರ ಕೂಗೋಕೆ ಶುರು ಮಾಡಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಕಪ್ಪು ಬಟ್ಟೆ ಪ್ರದರ್ಶನ ಮಾಡೋಕೆ ಶುರು ಮಾಡಿದ್ದರು. ಕಾರ್ಯಕ್ರಮ ಪ್ರಾರಂಭವಾದಾಗ ವೇದಿಕೆಯ ಮೇಲ್ಭಾಗಕ್ಕೆ ನುಗ್ಗಲು ಯತ್ನಿಸಿದ್ದರು. ಅಲ್ಲದೆ ಸರ್ಕಾರಿ ಕಾರ್ಯಕ್ರಮ ನಡೆಯಲು ಬಿಡುವುದಿಲ್ಲ ಅಂತ ಪೂರ್ವ ಯೋಜಿತವಾಗಿ ಸಂಘಟನೆ ಮಾಡಿಕೊಂಡು ಬಂದಿದ್ದಾರೆ ಎಂದು ಐಪಿಸಿ ಸೆಕ್ಷನ್ 143, 147, 152, 149 ಅಡಿ ಎಫ್ ಐಆರ್ ದಾಖಲಿಸಲಾಗಿದೆ.

ಇನ್ನು, ಸಚಿವ ಅಶ್ವಥ್ ನಾರಾಯಣ ಅವರ ಭಾವಚಿತ್ರ ಹರಿದು ಹಾಕಿದ ಸಂಬಂಧ ಸಹ ಮತ್ತೊಂದು ಎಫ್ ಐಆರ್ ದಾಖಲಾಗಿದೆ.

Join Whatsapp