ಸೋಲುವ ಭೀತಿಯಿಂದ ಸಿಎಂ ಉಪಚುನಾವಣಾ ಕ್ಷೇತ್ರಗಳಲ್ಲಿ ಮೊಕ್ಕಾಂ: ಡಿಕೆಶಿ ಲೇವಡಿ

Prasthutha|


ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಜೊತೆ ಕುಮಾರಕೃಪಾ ಅತಿಥಿಗೃಹದಲ್ಲಿ ಸಮಾಲೋಚನೆ ನಡೆಸಿದರು.

- Advertisement -


ಕೆಕೆ ಅತಿಥಿಗೃಹದಲ್ಲಿ ರಣದೀಪ್ ಸುರ್ಜೇವಾಲಾ ಇಂದು ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಜೊತೆ ವಿಶೇಷ ಸಭೆ ನಡೆಸಿದರು. ಎರಡು ಉಪ ಚುನಾವಣೆಗಳಲ್ಲಿ ಗೆಲುವು ಹಾಗೂ ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ರಾಷ್ಟ್ರೀಯ ನಾಯಕನ ಜೊತೆ ರಾಜ್ಯ ನಾಯಕರು ಚರ್ಚಿಸಿದ್ದಾರೆ.


ಸಭೆಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಎರಡು ಕ್ಷೇತ್ರಗಳಲ್ಲಿ ಗೆಲ್ಲಲು ಉತ್ತಮ ಅವಕಾಶವಿದೆ. ಬೇಕಾದಷ್ಟು ದುರುಪಯೋಗ ನಡೆಯುತ್ತಿದೆ. ಏನು ಬೇಕಾದರೂ ಮಾಡಲಿ. ನಾವು ಇದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಗೆಲ್ಲುವ ವಿಶ್ವಾಸವಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

- Advertisement -


ಬಿಜೆಪಿಯವರು ವಿಧಾನಸೌಧಕ್ಕೆ ಬೀಗ ಹಾಕಿದ್ದಾರೆ. ಒಬ್ಬರೆ ಒಬ್ಬ ಮಂತ್ರಿ ಅಲ್ಲಿಲ್ಲ. ಎಲ್ಲರೂ ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಡೀ ಮಂತ್ರಿ ಮಂಡಲ ಅಲ್ಲೇ ಹೋಗಿ ಕುಳಿತಿದೆ. ಇಲ್ಲಿ ಸಭೆ ಮಾಡಲು ಕೂಡ ಒಬ್ಬರಿಲ್ಲ. ಮುಖ್ಯಮಂತ್ರಿಯಾದವರು ಉಪಚುನಾವಣೆ ಪ್ರಚಾರಕ್ಕಾಗಿ ಒಂದು ಬಾರಿ ಅಥವಾ ಎರಡು ಬಾರಿ ಹೋಗುತ್ತಾರೆ. ಆದರೆ, ಬೊಮ್ಮಾಯಿ ಅವರು ಜವಾಬ್ದಾರಿ ಸಿಎಂ ಆಗಿ ಅಲ್ಲೇ ಟೆಂಟ್ ಹಾಕಿರುವುದು ಎಷ್ಟು ಸರಿ, ಸಿಎಂಗೆ ಸೋಲುವ ಭಯ ಇರುವುದರಿಂದ ಅಲ್ಲೇ ಹೋಗಿ ಕುಳಿತಿದ್ದಾರೆ ಎಂದರು. ಉಪಚುನಾವಣೆಯಲ್ಲಿ ಎರಡು ಕಡೆ ನಮ್ಮ ಅಭ್ಯರ್ಥಿಗಳು ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.



Join Whatsapp