ಪತ್ನಿಗೆ ವಿಚ್ಛೇದನ ನೀಡಬಹುದು ಮಕ್ಕಳಿಗೆ ಅಲ್ಲ: ಸುಪ್ರೀಂಕೋರ್ಟ್

Prasthutha|

ನವದೆಹಲಿ: ಪತ್ನಿಗೆ ವಿಚ್ಛೇದನ ನೀಡಬಹುದು. ಆದರೆ, ಮಕ್ಕಳಿಗೆ ವಿಚ್ಛೇದನ ನೀಡುವುದು ಸಾಧ್ಯವಿಲ್ಲ ಎಂದು ವಿಚ್ಛೇದನ ಪ್ರಕರಣವೊಂದರ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.

- Advertisement -

ಮುಂಬೈ ಮೂಲದ ಆಭರಣ ವ್ಯಾಪಾರಿ ಸಲ್ಲಿಸಿದ್ದ ವಿಚ್ಛೇದನ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ ಚಂದ್ರಚೂಡ್ ಮತ್ತು ಎಂ.ಆರ್ ಶಾ ಅವರಿದ್ದ ದ್ವಿಸದಸ್ಯ ಪೀಠವು ಈ ತೀರ್ಪು ನೀಡಿದೆ. ಪರಸ್ಪರ ಒಪ್ಪಂದದ ನಿಯಮಗಳನ್ನು ಪಾಲಿಸುವಂತೆ ಇಬ್ಬರಿಗೂ ಆದೇಶಿಸಿದೆ.

2019 ರಿಂದ ಬೇರೆಯಾಗಿದ್ದ ಪತಿ, ಪತ್ನಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಕೋರ್ಟ್‌ ಅನುಮತಿ ನೀಡಿತು. ಮಕ್ಕಳ ಆರೈಕೆಗಾಗಿ ನಾಲ್ಕು ಕೋಟಿ ಪರಿಹಾರ ನೀಡಿ ಎಂದು ವ್ಯಕ್ತಿಯೋರ್ವನಿಗೆ ನ್ಯಾಯಾಲಯ ಆದೇಶ ನೀಡಿದೆ.

- Advertisement -

ಕೋವಿಡ್‌ ನಿಂದ ಬದಲಾದ ಸನ್ನಿವೇಶದಲ್ಲಿ ತನ್ನ ಕಕ್ಷಿದಾರರು 4 ಕೋಟಿ ರೂ. ಪರಿಹಾರ ನೀಡಲು ಹೆಚ್ಚಿನ ಸಮಯ ನೀಡಬೇಕು ಎಂದು ಅರ್ಜಿದಾರನ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ನ್ಯಾಯಪೀಠ ಒಪ್ಪಲಿಲ್ಲ. ನಿಮ್ಮ ಮಕ್ಕಳನ್ನು ನೀವೇ ನೋಡಿಕೊಳ್ಳಬೇಕು. ಅಪ್ರಾಪ್ತ ಮಗುವಿನ ನಿರ್ವಹಣೆಗಾಗಿ ಹೇಳಿದ ಮೊತ್ತವನ್ನು ಪಾವತಿಸಬೇಕೆಂದು ನ್ಯಾಯಾಲಯ ಹೇಳಿದೆ.,



Join Whatsapp