ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರೊಂದಿಗೆ ಚರ್ಚೆ

Prasthutha|

ನವದೆಹಲಿ: ಕನ್ನಡ ಚಿತ್ರರಂಗವು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ, ಚಲನ ಚಿತ್ರ ನಿರ್ದೇಶಕರು, ನಿರ್ಮಾಪಕರು, ವಿತರಕರು ಹಾಗೂ ಕಲಾವಿದರ ಸಂಘದ ಪ್ರತಿನಿಧಿಗಳು, ಗೃಹ ಸಚಿವ ಆರಗ ಜ್ಞಾನೇಂದ್ರ, ಕಾನೂನು ಸಚಿವ ಮಾಧುಸ್ವಾಮಿ, ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರನ್ನು ಭೇಟಿಯಾಗಿ ಸಭೆ ನಡೆಸಿದರು.

- Advertisement -

ಸರಕಾರವು ಈ ಹಿಂದೆ ಜನತಾ ಚಿತ್ರಮಂದಿರಗಳನ್ನು ಸ್ಥಾಪಿಸಲು 50 ಲಕ್ಷ ರೂಪಾಯಿಗಳ ಅನುದಾನ ಘೋಷಣೆ ಮಾಡಿದ್ದರೂ ಯೋಜನೆ ಜಾರಿ ಆಗುತ್ತಿಲ್ಲ, ಆ್ಯಪ್ ಮೂಲಕ ಟಿಕೆಟ್ ಮಾರಾಟ ಆಗುತ್ತಿರುವುದರಂದ ತೊಂದರೆಗಳು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಚಿತ್ರ ರಂಗದ ಪ್ರಮುಖರಾದ ರಾಜೇಂದ್ರ ಸಿಂಗ್ ಬಾಬು, ನಾಗಭರಣ, ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಇತರ ಗಣ್ಯರೂ ನಿಯೋಗದಲ್ಲಿದ್ದರು.

Join Whatsapp