ತಂದೆ, ತಾಯಿ ಹಾಗೂ 2 ವರ್ಷದ ಮಗು ಕಣ್ಮರೆ: ನಿಗೂಢವಾಗುತ್ತಿರುವ ಪ್ರಕರಣ

Prasthutha|

ದಾವಣೆಗೆರೆ: ತಂದೆ, ತಾಯಿ ಹಾಗೂ ಎರಡು ವರ್ಷದ ಮಗು ನಿಗೂಢವಾಗಿ ಕಣ್ಮರೆಯಾದ ಪ್ರಕರಣ ನಿಗೂಢವಾಗುತ್ತಿದೆ 34 ವರ್ಷದ ಅಂಜನ್ ಬಾಬು, 24 ವರ್ಷದ ನಾಗವೇಣಿ, ಎರಡು ವರ್ಷದ ನಕ್ಷತ್ರ ಕಾಣೆಯಾಗಿದ್ದಾರೆ.

- Advertisement -

ನಗರದ ವಿನೋಬ ನಗರದಲ್ಲಿ ಬಾಡಿಗೆಗೆ ವಾಸವಾಗಿದ್ದ ಈ ಕುಟುಂಬ ಕೊನೆಯದಾಗಿ ಕಾಣಿಸಿಕೊಂಡಿದ್ಧು ಕಳೆದ ತಿಂಗಳು ಏಪ್ರಿಲ್ 12ರಂದು. ಅದಾದ ನಂತರ ಈ ಮೂವರು ಎಲ್ಲಿಗೆ ಹೋಗಿದ್ದಾರೆ ಅನ್ನೋದು ಗೊತ್ತಾಗದೆ ಕುಟುಂಬದವರು ಪರಿತಪಿಸುವಂತಾಗಿದೆ. ನಾಗವೇಣಿ ನಾಗವೇಣಿ ತಾಯಿ ರುದ್ರವ್ವ ಬಡಾವಣೆ ಪೊಲೀಸ್ ಠಾಣೆಯಲ್ಲಿ ನನ್ನ ಮಗಳು, ಅಳಿಯ ಮತ್ತು ಮೊಮ್ಮಗಳನ್ನು ಹುಡುಕಿ ಕೊಡಿ ಎಂದು ದೂರು ನೀಡಿದ್ದಾರೆ.

ವಿಚಾರದಲ್ಲಿ ಅಂಜನ್ ಬಾಬು ಸಾಕಷ್ಟು ಸಾಲ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ. ಇನ್ನೊಂದು ಕಡೆ ಆಸ್ತಿ ವಿಚಾರದಲ್ಲಿ ಗೋಲ್ಮಾಲ್ ಆಗಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಈ ರೀತಿಯ ಘಟನೆ ನಡೆದಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಒಟ್ಟಾರೆ ಅಂಜನ್ ಮತ್ತು ಕುಟುಂಬ ಕಾಣೆಯಾಗಲು ನಿಜವಾದ ಕಾರಣ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.

- Advertisement -

ಮಾಹಿತಿ ಪ್ರಕಾರ ಬಿಜಾಪುರ ಜಿಲ್ಲೆಯಲ್ಲಿ ತಿಕೋಟದ ಗ್ರಾಮವೊಂದರಲ್ಲಿ ಅವರು ಇರುವ ಕುರಿತಂತೆ ಶಂಕೆ ವ್ಯಕ್ತವಾಗಿದೆ. ಸಾಲ ಹೆಚ್ಚಾದ ಹಿನ್ನೆಲೆಯಲ್ಲಿ ಅಂಜನ್ ಬಾಬು ಕುಟುಂಬ ಹೋಗಿರಬಹುದಾ? ಆಸ್ತಿ ಕಲಹದಿಂದ ಏನಾದರೂ ಕಿಡ್ನಾಪ್ ಆಗಿರಬಹುದಾ? ಬೇರೆ ಏನಾದರೂ ವಿಚಾರ ಇರಬಹುದಾ ಎಂಬುದು ಸೇರಿದಂತೆ ನಾನಾ ಪ್ರಶ್ನೆಗಳು ಹುಟ್ಟಿಕೊಂಡಿದೆ.

Join Whatsapp