ದೇಶವನ್ನು ಗತಿಗೆಟ್ಟ ಸ್ಥಿತಿಗೆ ತಂದ ಮೋದಿಯವರ ಆಡಳಿತ ತುಂಬಾ ಅದ್ಭುತ: ದಿನೇಶ್ ಗುಂಡೂರಾವ್ ವ್ಯಂಗ್ಯ

Prasthutha|

ಬೆಂಗಳೂರು: ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒಳ್ಳೆಯ ಕಾಲ ಕೂಡಿ ಬರಲಿದೆ ಎಂದು ಬೊಗಳೆ ಬಿಡುತ್ತಿದ್ದ ಪಕ್ಷದ  ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್ ರನ್ನು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್  ಲೇವಡಿ ಮಾಡಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು,  BJP ರಾಜ್ಯಾಧ್ಯಕ್ಷ ನಳಿನ್ ಕಟೀಲ್  ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ 1 ರೂ. ಗೆ 15 ಡಾಲರ್ ಕೊಡುವ ಕಾಲ ಬರುತ್ತದೆ ಎಂದಿದ್ದರು. ಮೋದಿ ಅಧಿಕಾರಕ್ಕೆ ಬಂದು 8 ವರ್ಷವಾಯಿತು. 1 ರೂ. ಗೆ 15 ಡಾಲರ್ ಆಗುವುದಿರಲಿ ಈಗ 77 ರೂ. ಗೂ 1 ಡಾಲರ್ ಸಿಗದಂತಾಗಿದೆ. ಕಟೀಲ್‌ರವರೇ ದೇಶವನ್ನು ಗತಿಗೆಟ್ಟ ಸ್ಥಿತಿಗೆ ತಂದ ಮೋದಿಯವರ ಆಡಳಿತ ಎಷ್ಟು ಅದ್ಭುತವಲ್ಲವೆ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

Join Whatsapp