ಅಲ್’ಜಝೀರಾ ಪತ್ರಕರ್ತೆಯನ್ನು ಗುಂಡಿಕ್ಕಿ ಕೊಂದ ಇಸ್ರೇಲ್ ಪಡೆ !

Prasthutha|

ಫೆಲೆಸ್ತೀನ್:  ಪಶ್ಚಿಮ ದಂಡೆಯಲ್ಲಿ ಅಲ್ ಜಝೀರಾದ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ಅವರನ್ನು ಇಸ್ರೇಲಿ ಪಡೆಗಳು ಗುಂಡಿಕ್ಕಿ ಕೊಂದಿವೆ ಎಂದು ವರದಿಯಾಗಿದೆ.

- Advertisement -

ಅಬು  ಅವರು ಬುಧವಾರ ಜೆನಿನ್ ನಗರದಲ್ಲಿ ಇಸ್ರೇಲಿ ದಾಳಿಗಳನ್ನು ವರದಿ ಮಾಡುವಾಗ ಲೈವ್ ಬುಲೆಟ್‌ ನಿಂದ ಹೊಡೆದ ಪರಿಣಾಮ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸಲಾಯಿತು. ಬಳಿಕ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಅವರ ಸಾವಿನ ಸನ್ನಿವೇಶಗಳು ಸ್ಪಷ್ಟವಾಗಿಲ್ಲ. ಆದರೆ ಅಬು ಅಕ್ಲೆಹ್ ಅವರ ತಲೆಗೆ ಗುಂಡು ಹಾರಿಸಿರುವುದು ಸ್ಥಳದಲ್ಲಿ ಚಿತ್ರೀಕರಿಸಲಾದ ವೀಡಿಯೊಗಳು ತೋರಿಸುತ್ತವೆ ಎಂದು ಅಲ್ ಜಝೀರಾದ ನಿದಾ ಇಬ್ರಾಹಿಂ ಹೇಳಿದ್ದಾರೆ.

- Advertisement -

“ಸದ್ಯದ ಮಾಹಿತಿ ಪ್ರಕಾರ, ಫೆಲೆಸ್ತೀನ್ ಆರೋಗ್ಯ ಸಚಿವಾಲಯವು ಪತ್ರಕರ್ತೆಯ ಮರಣವನ್ನು ಘೋಷಿಸಿದೆ. ಜೆನಿನ್ ನಲ್ಲಿ ನಡೆಯುತ್ತಿರುವ ಘಟನೆಗಳನ್ನು, ವಿಶೇಷವಾಗಿ ಆಕ್ರಮಿತ ಪಶ್ಚಿಮ ದಂಡೆಯ ಉತ್ತರಕ್ಕಿರುವ ನಗರದ ಮೇಲೆ ಇಸ್ರೇಲಿ ದಾಳಿ ನಡೆಸುತ್ತಿದ್ದಾಗ ವರದಿ ಮಾಡುತ್ತಿದ್ದ ಅಕ್ಲೆಹ್ ಅವರ ತಲೆಗೆ ಗುಂಡು ತಗುಲಿದೆ” ಎಂದು ಇಬ್ರಾಹೀಂ ತಿಳಿಸಿದ್ದಾರೆ.

ಅಬು ಅಕ್ಲೆಹ್  ಓರ್ವ “ಗೌರವಾನ್ವಿತ ಪತ್ರಕರ್ತೆ” ಯಾಗಿದ್ದು, 2000 ರಲ್ಲಿ ಎರಡನೇ ಫೆಲೆಸ್ತೀನ್ ಇಂತಿಫಾದಾ ಪ್ರಾರಂಭವಾದಾಗಿನಿಂದ ಅಲ್ ಜಝೀರಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಪತ್ರಕರ್ತೆಯ ಸಾವಿನ ಬಗ್ಗೆ ಇಸ್ರೇಲಿ ಮಿಲಿಟರಿಯಿಂದ ತಕ್ಷಣದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Join Whatsapp