ರೈತ ಹೋರಾಟಕ್ಕಾಗಿ ದಿಲ್ಜಿತ್ ಸಿಂಗ್ ರಿಂದ 1 ಕೋಟಿ ರೂಪಾಯಿ ದಾನ

Prasthutha|

ಹೊಸದಿಲ್ಲಿ: ದಿಲ್ಜಿತ್ ಸಿಂಗ್ ಕೆಲವೇ ದಿನಗಳ ಹಿಂದಷ್ಟೇ ಕಂಗನಾ ರಾಣವತ್ ರನ್ನು ಟೀಕಿಸಿರುವುದು ಇಂಟರ್ ನೆಟ್ ನಲ್ಲಿ ಗಮನ ಸೆಳೆದಿತ್ತು. ದಿಲ್ಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರಿಗಾಗಿ ಚಳಿಗಾಲದ ಉಡುಪನ್ನು ಖರೀದಿಸಲು ಪಂಜಾಬಿ ನಟ-ಗಾಯಕ 1 ಕೋಟಿ ರೂಪಾಯಿಗಳನ್ನು ದಾನ ಮಾಡಿದ್ದಾರೆ.

- Advertisement -

ಪಂಜಾಬಿ ಗಾಯಕ ಸಿಂಘ ತಮ್ಮ ಇನ್ ಸ್ಟಗ್ರಾಂ ಸ್ಟೋರಿಯಲ್ಲಿ ಈ ದೇಣಿಗೆಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿದ್ದಾರೆ. ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯನ್ನು ಮುಂದುವರಿಸುವುದಕ್ಕಾಗಿ ರಾಷ್ಟ್ರ ರಾಜಧಾನಿಯಲ್ಲಿ ಸೇರಿರುವ ರೈತರಿಗೆ ಕಂಬಳಿ ಮತ್ತು ಇತರ ಬೆಚ್ಚಗಿನ ಉಡುಪು ಖರೀದಿಸುವುದಕ್ಕಾಗಿ ದಿಲ್ಜಿತ್ ರಹಸ್ಯವಾಗಿ 1 ಕೋಟಿ ರೂಪಾಯಿಗಳನ್ನು ದಾನ ಮಾಡಿದ್ದಾರೆ ಎಂದು ಅವರು ತಮ್ಮ ಇನ್ ಸ್ಟಾಗ್ರಂ ನಲ್ಲಿ ನಟನನ್ನು ಹೊಗಳುತ್ತಾ ಬರೆದಿದ್ದಾರೆ.

ದಿಲ್ ಜಿತ್ ಶನಿವಾರದಂದು ಸಿಂಘು ಗಡಿಯಲ್ಲಿ  ಪ್ರತಿಭಟನಾ ನಿರತ ರೈತರನ್ನು ಸೇರಿದ್ದರು. “ಎಲ್ಲಾ ರೈತರಿಗೆ ಗೌರವ ವಂದನೆಗಳು. ನೀವು ಹೊಸ ಇತಿಹಾಸವನ್ನು ಸೃಷ್ಟಿಸಿರುವಿರಿ. ಮುಂದಿನ ಪೀಳಿಗೆಗೆ ಈ ಇತಿಹಾಸವನ್ನು ವಿವರಿಸಲಾಗುವುದು. ರೈತರ ವಿಷಯಗಳನ್ನು ಯಾವುದೇ ವ್ಯಕ್ತಿಯಿಂದ ದಾರಿ ತಪ್ಪಲು ಅವಕಾಶ ನೀಡಬಾರದು” ಎಂದು ಅವರು ರೈತರನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದರು.

Join Whatsapp