4 ವರ್ಷದ ಬಾಲಕಿಯ ಮೇಲೆ ಡಿಜಿಟಲ್ ರೇಪ್: FIR ದಾಖಲು

Prasthutha|

ನೋಯ್ಡಾ: ನಾಲ್ಕು ವರ್ಷದ ಬಾಲಕಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

- Advertisement -

ತನ್ನ ಮಗಳೊಂದಿಗೆ “ಡಿಜಿಟಲ್ ಅತ್ಯಾಚಾರ” (ಪುರುಷ ಜನನಾಂಗವನ್ನು ಹೊರತುಪಡಿಸಿ ದೇಹದ ಯಾವುದೇ ಭಾಗವನ್ನು ಬಳಸಿಕೊಂಡು ಬಲವಂತದ ಲೈಂಗಿಕ ಕ್ರಿಯೆ) ಎಂದು ಆರೋಪಿಸಿರುವ ವಿದ್ಯಾರ್ಥಿಯ ತಾಯಿ, ಸೆಕ್ಟರ್ 39 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಎಫ್ ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೆಪ್ಟೆಂಬರ್ 7 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಶಾಲೆಯಿಂದ ಬಂದ ಬಳಿಕ ಮಗು, ಮೈ ತುರಿಸುತ್ತದೆ ಎಂದು ಹೇಳಿದಾಗ, ತಾಯಿಗೆ ಈ ಘಟನೆ ತಿಳಿದುಬಂದಿದ್ದು, ಈ ಸಂಬಂಧ  ಸೆ. 9ರಂದು ತಾಯಿ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ದೂರಿನ ಆಧಾರದಲ್ಲಿ ಎಫ್ ಐಆರ್ ದಾಖಲಿಸಲಾಗಿದ್ದು, ಬಾಲಕಿಯ ವೈದ್ಯಕೀಯ ತಪಾಸಣೆ ನಡಸಿದಾಗ, ಯಾವುದೇ ಬಾಹ್ಯ ಗಾಯಗಳು ಕಂಡುಬಂದಿಲ್ಲ” ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ನೋಯ್ಡಾ) ಅಶುತೋಷ್ ದ್ವಿವೇದಿ ತಿಳಿಸಿದ್ದಾರೆ. ಮಗುವಿನ ಆಂತರಿಕ ತಪಾಸಣೆಗೆ ದೂರುದಾರರು ಅವಕಾಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಸಂಗ್ರಹಿಸಲಾಗಿದ್ದು, ಶಾಲೆಯ ಕಾರಿಡಾರ್ ನಲ್ಲಿ ಮಗುವಿನ ಜತೆ ಯಾರೂ ಇದ್ದುದು ಕಂಡುಬರುತ್ತಿಲ್ಲ. ಈ ದೃಶ್ಯಾವಳಿಗಳನ್ನು ತಾಯಿಗೂ ತೋರಿಸಲಾಗಿದೆ. ಈ ಘಟನೆಯಲ್ಲಿ ಅತ್ಯಾಚಾರದ ಯಾವುದೇ ಪುರಾವೆಗಳು ಇಲ್ಲಿಯವರೆಗೆ ತನಿಖೆಯಲ್ಲಿ ಕಂಡುಬಂದಿಲ್ಲ. ಆದರೆ ಹೆಚ್ಚಿನ ತನಿಖೆ ನಡೆಯುತ್ತಿದೆ ಮತ್ತು ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಡಿಸಿಪಿ ಹೇಳಿದರು.

ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2012 ರ ಕ್ರೂರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ಲೈಂಗಿಕ ಅಪರಾಧವನ್ನು “ಡಿಜಿಟಲ್ ಅತ್ಯಾಚಾರ” ಎಂದು ವರ್ಗೀಕರಿಸಲಾಗಿದೆ. ಅದರ ಅಪರಾಧಿಗಳನ್ನು ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ದಾಖಲಿಸಲಾಗಿದ್ದರೂ, ‘ಡಿಜಿಟಲ್ ಅತ್ಯಾಚಾರ’ ಎಂಬ ಪದದ ಬಳಕೆ ಮತ್ತು ಅಂತಹ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸುವುದು ದೇಶದಲ್ಲಿ ಇನ್ನೂ ತುಲನಾತ್ಮಕವಾಗಿ ಕಡಿಮೆ ಇದೆ.



Join Whatsapp