ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ: ಟ್ವಿಟ್ಟರ್ ನಲ್ಲಿ #DiaperSuryaExposed ಎಂಬ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್

Prasthutha|


ಕೋವಿಡ್ ರೋಗಿಗಳಿಗೆ ಹಾಸಿಗೆ ಹಂಚಿಕೆ ಮಾಡುವಲ್ಲಿ ಬೆಡ್ ಬ್ಲಾಕಿಂಗ್ ದಂಧೆ ನಡೆದಿದೆ ಎಂದು ಆರೋಪಿಸಿ ಈ ದಂಧೆಗೆ ಕೋಮು ಬಣ್ಣ ನೀಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, #DiaperSuryaExposed ಎಂಬ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.

- Advertisement -


ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬಿಬಿಎಂಪಿಯ ವಾರ್ ರೂಮ್ ನಲ್ಲಿದ್ದ ಮುಸ್ಲಿಂ ಸಿಬ್ಬಂದಿ ಕೈವಾಡವಿದೆ ಎಂದು ಸೂರ್ಯ ಅವರು ಆರೋಪಿಸಿದ್ದರು.
ಸರ್ಕಾರದ ಸರಣಿ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ತೇಜಸ್ವಿ ಸೂರ್ಯ ಅವರು ಈ ಆರೋಪ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆರೋಪಿಸಿದ್ದಾರೆ.

Join Whatsapp