ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸುವುದೇ ಕನ್ನಡ ಭಾಷೆಗೆ ಕೊಡುವ ಗೌರವ: ಆಮಿರ್ ಬನ್ನೂರು

Prasthutha|

ಬೆಂಗಳೂರು: 67ನೇ ಕನ್ನಡ ರಾಜ್ಯೋತ್ಸವವನ್ನು ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ ವತಿಯಿಂದ ಸಸಿ ನೆಡುವ ಮೂಲಕ ಆಚರಿಸಲಾಯಿತು.

- Advertisement -

ಕಾರ್ಯಕ್ರಮದಲ್ಲಿ ಭಾಗವಹಿಸಿದ ಖಿದ್ಮಾ ಫೌಂಡೇಶನ್  ಕರ್ನಾಟಕ ರಾಜ್ಯ ಸಂಚಾಲಕ ಆಮಿರ್ ಬನ್ನೂರು ಮಾತನಾಡಿ, ಕನ್ನಡ ಭಾಷೆಯ ಮೇಲಿರುವ ಅಭಿಮಾನ ಕೇವಲ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುವುದಕ್ಕೆ ಮಾತ್ರವಾಗಬಾರದು, ಹೊರತು ಕನ್ನಡ ಭಾಷೆಯನ್ನು ಪ್ರತಿಯೊಬ್ಬರೂ ಬಳಸುವಂತಹ ಸನ್ನಿವೇಶ ನಿರ್ಮಾಣವಾಗಬೇಕಿದೆ. ಸರಕಾರಿ ಶಾಲೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಿದರೆ ಮಾತ್ರ ಕನ್ನಡ ಭಾಷೆಯನ್ನು ಬೆಳೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮುಖಂಡರಾದ ಸೈದುಸಾಬ್ ಹಿರೇಮನಿ, ಸೈದುಸಾಬ್ ಅಬ್ಬಿಗೆರಿ, ವೀರಣ್ಣ ತಮ್ನಾಳ್, ಮಬು ಆರ್ ಬಳ್ಳಿನ್, ಅಬ್ದುಲ್ ಹಿರೇಮನಿ, ಸದ್ದಾಂ ಹಿರೇಮನಿ,ಉಮೇಶ್ ಕಲಾಲ್,ಚಂದ್ರು ಆರ್ ಹಾಗೂ ಸುಹೈಲ್ ಮಸುತಿ ಉಪಸ್ಥಿತರಿದ್ದರು.

Join Whatsapp