ದೇವರ ಆಟ ಏನೋ ಗೊತ್ತಿಲ್ಲ, ದೆವ್ವಗಳಂತೂ ದೇಶ ಆಳುತ್ತಿವೆ : ದೇವನೂರ ಮಹಾದೇವ

Prasthutha|

ಮೈಸೂರು : ದೇವರ ಆಟ ಏನೋ ತಿಳಿದಿಲ್ಲ, ಆದರೆ ದೆವ್ವಗಳಂತೂ ದೇಶ ಆಳುತ್ತಿರುವುದು ನಿಜ ಎಂದು ಖ್ಯಾತ ಸಾಹಿತಿ ದೇವನೂರ ಮಹಾದೇವ ಆಡಳಿತಾರೂಢ ಬಿಜೆಪಿ ವಿರುದ್ಧ ಚಾಟಿ ಬೀಸಿದ್ದಾರೆ. ಭು ಸುಧಾರಣಾ ಕಾಯ್ದೆ ತಿದ್ದುಪಡಿ – ಖಾಸಗೀಕರಣ ನೀತಿಗಳ ಪರಿಣಾಮ ಮತ್ತು ಸವಾಲುಗಳು ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು.

“ಕೊರೋನ ಎಂಬ ದೇವರ ಆಟದಿಂದ ರಾಜ್ಯಗಳಿಗೆ ನೀಡಬೇಕಾದ ಮೊತ್ತ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿರುವ ವಿತ್ತ ಸಚಿವೆಯನ್ನು ನಮ್ಮ ದೇಶ ಹೊಂದಿದೆ. ದೇಶಾದ್ಯಂತ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುವ ಜಿಎಸ್ ಟಿ ತಂದು ದೆವ್ವದ ಆಟ ಆಡುತ್ತಿರುವವರು ಯಾರು?’’ ಎಂದು ಅವರು ಪ್ರಶ್ನಿಸಿದರು.

- Advertisement -

“ಜನರು ಸಂಕಷ್ಟದಲ್ಲಿ ಧ್ವನಿ ಎತ್ತಲು ಸಾಧ್ಯವಾಗದ ಈ ಸಂದರ್ಭವನ್ನು ದುರ್ಬಳಕೆ ಮಾಡಿ, ಖಾಸಗಿ ಮತ್ತು ಕಾರ್ಪೊರೇಟ್ ಕಂಪೆನಿಗಳಿಗೆ ಎಲ್ಲಾ ಲಾಭ ಒದಗಿಸುವ ಕಾಯ್ದೆಯನ್ನು ಜಾರಿಗೆ ತರುವ ಪ್ರಯತ್ನವನ್ನು ಈ ಸರಕಾರ ಮಾಡುತ್ತಿದೆ. ಈ ಸರಕಾರ ಜನವಿರೋಧಿಯಾಗಿದೆ’’ ಎಂದು ದೇಶದ ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ಕಿಡಿಗಾರಿದರು.

- Advertisement -