ಕಾರಿನೊಳಗೆ ಮೂವರು ಕುಳಿತಿದ್ದರೂ, ಕಾರನ್ನು ಹೊತ್ತೊಯ್ದ ಟೋಯಿಗ್ ಕ್ರೇನ್!

Prasthutha|

ಲಕ್ನೋ: ಟೋಯಿಂಗ್ ಕುರಿತು ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ‘ಟೈಗರ್’ ಕಾರ್ಯಾಚರಣೆಗೆ ಬ್ರೇಕ್ ಬಿದ್ದಿದೆ. ಟೋಯಿಂಗ್ ಮಾಡುವ ಸಿಬ್ಬಂದಿ ಎಷ್ಟೊಂದು ಬೇಜವಾಬ್ದಾರಿಯಾಗಿ ವರ್ತಿಸುತ್ತಾರೆ ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊವೊಂದು ಸಾಕ್ಷಿಯಾಗಿದೆ.

- Advertisement -


ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಸ್ನೇಹಿತರು ಕಾರಿನೊಳಗೆ ಕುಳಿತಿದ್ದರೂ ಸಹ ಟೋಯಿಂಗ್ ಕ್ರೇನ್ ಕಾರನ್ನು ಎಳೆದುಕೊಂಡು ಹೋಗಿದೆ.
ಉತ್ತರಪ್ರದೇಶದ ಲಕ್ನೋದಲ್ಲಿ ಘಟನೆ ನಡೆದಿದ್ದು, ಕಾರಿನೊಳಗೆ ಜನರಿದ್ದರೂ ಟೋಯಿಂಗ್ ಮಾಡುತ್ತಿರುವ ವೀಡಿಯೋ-ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆದ ಬಳಿಕ ಘಟನೆ ಕುರಿತು ಲಕ್ನೋ ಮುನ್ಸಿಪಲ್ ಕಮಿಷನರ್ ತನಿಖೆಗೆ ಆದೇಶಿಸಿದ್ದಾರೆ.
ಹಜರತ್ ಗಂಜ್ನ ಜನಪಥ್ ನಲ್ಲಿ ಕಾರನ್ನು ನಿಲ್ಲಿಸಿ ಚಾಲಕ ಸುನೀಲ್ ಸಮೀಪದ ಮಳಿಗೆಗೆ ತೆರಳಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಟೋಯಿಂಗ್ ಕ್ರೇನ್ ಕಾರಿನಲ್ಲಿ ಮೂರು ಮಂದಿ ಕುಳಿತಿರುವುದನ್ನೂ ಗಮನಿಸದೆ ಕಾರನ್ನು ಎಳೆದುಕೊಂಡು ಹೋಗಿದೆ.
ನಿಯಮಗಳ ಪ್ರಕಾರ, ನೋ-ಪಾರ್ಕಿಂಗ್ ವಲಯದಲ್ಲಿ ನಿಲ್ಲಿಸಿದ ಕಾರಿನೊಳಗೆ ಯಾರಾದರೂ ಕುಳಿತಿದ್ದರೆ, ವಾಹನವನ್ನು ಟೋವ್ ಮಾಡುವಂತಿಲ್ಲ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಲಕ್ನೋ ಪಾಲಿಕೆ ಆಯುಕ್ತ ಅಜಯ್ ದ್ವಿವೇದಿ, ಕ್ರೇನ್ಗಳನ್ನು ಗುತ್ತಿಗೆದಾರರು ನಿರ್ವಹಿಸುತ್ತಿದ್ದು, ಅವರಿಗೆ 1 ವರ್ಷದ ಗುತ್ತಿಗೆ ನೀಡಲಾಗಿದೆ ಎಂದಿದ್ದಾರೆ.

- Advertisement -


ಘಟನೆಯ ಬಗ್ಗೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಲಕ್ನೋ ಅಧಿಕಾರಿಗಳು ನಗರದಲ್ಲಿ ಎಲ್ಲಾ ಟೋಯಿಂಗ್ ಕ್ರೇನ್ಗಳ ಕಾರ್ಯಾಚರಣೆಯನ್ನು ನಿಷೇಧಿಸಿದ್ದಾರೆ.

Join Whatsapp