ಬೆಂಗಳೂರು । ನ್ಯಾಯಾಲಯದ ಆದೇಶದ ಹೊರತಾಗಿಯೂ ಆಕಾರ್ ಪಟೇಲ್ ಗೆ ಅಮೆರಿಕ ಪ್ರಯಾಣಕ್ಕೆ ಮತ್ತೆ ತಡೆ

Prasthutha|

ಬೆಂಗಳೂರು: ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಮುಖ್ಯಸ್ಥ ಆಕಾರ್ ಪಟೇಲ್ ವಿರುದ್ಧ ಸಿಬಿಐ ಹೊರಡಿಸಿದ್ದ ಲುಕ್ ಔಟ್ ನೋಟಿಸ್ ಹಿಂಪಡೆಯಲು ದೆಹಲಿ ನ್ಯಾಯಾಲಯ ಗುರುವಾರ ಆದೇಶ ನೀಡಿದ ಹೊರತಾಗಿಯೂ ಮತ್ತೆ ಅಮೆರಿಕ ಪ್ರಯಾಣಿಸದಂತೆ ಬೆಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ತಡೆ ಹಿಡಿಯಲಾಗಿದೆ.

- Advertisement -

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ ಅವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತನ್ನನ್ನು ಮತ್ತೆ ತಡೆದಿದ್ದಾರೆ ಮತ್ತು ಲುಕ್ ಔಟ್ ನೋಟಿಸನ್ನು ಸಿಬಿಸಿ ಅಧಿಕಾರಿಗಳು ಹಿಂಪಡೆದಿಲ್ಲ ಎಂದು ಆರೋಪಿಸಿದ್ದಾರೆ.

ಅಗತ್ಯವಿದ್ದರೆ ಮತ್ತೆ ನ್ಯಾಯಾಲಯದ ಮೊರೆ ಹೋಗುವುದಾಗಿ ಆಕಾರ್ ಪಟೇಲ್ ತಿಳಿಸಿದ್ದಾರೆ.

- Advertisement -

ಇತ್ತೀಚಿನ ಪುಸ್ತಕವಾದ ‘ಪ್ರೈಸ್ ಆಫ್ ದಿ ಮೋದಿ ಇಯರ್ಸ್’ ಸೇರಿದಂತೆ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಲು ಅಮೆರಿಕದ ಮೂರು ವಿಶ್ವವಿದ್ಯಾನಿಯಗಳಿಂದ ಆಹ್ವಾನಿತರಾಗಿದ್ದ ಮಾಜಿ ಪತ್ರಕರ್ತ ಆಕಾರ್ ಪಟೇಲ್ ಅವರು ವಿರುದ್ಧ ಸಿಬಿಐ ಹೊರಡಿಸಿದ್ದ LOC ಆಧಾರದಲ್ಲಿ ಏಪ್ರಿಲ್ 6 ರಂದು ಬೆಂಗಳೂರು ತೊರೆಯದಂತೆ ತಡೆಯಲಾಗಿತ್ತು.

ಇದರ ವಿರುದ್ಧ ಆಕಾರ್ ಪಟೇಲ್ ನ್ಯಾಯಾಲಯದ ಮೊರೆ ಹೋಗಿದ್ದು, ಗುರುವಾರ ಸಿಬಿಐ LOC ಸುತ್ತೋಲೆಯಿಂದ ಅವರ ಹೆಸರನ್ನು ತೆಗೆದು ಹಾಕುವಂತೆ ಆದೇಶಿಸಿತ್ತು.

ಈ ಅದೇಶದ ಹಿನ್ನೆಲೆಯಲ್ಲಿ ಗುರುವಾರ ಮತ್ತೆ ಅಮೆರಿಕ ಪ್ರಯಾಣ ಬೆಳೆಸಲು ಯತ್ನಿಸಿದಾಗ LOC ಯಲ್ಲಿ ಹೇರಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸದ ಕಾರಣ ಎಮಿಗ್ರೇಷನ್ ಅಧಿಕಾರಿಗಳು ಮತ್ತೆ ತಡೆದು ನಿಲ್ಲಿಸಿದ್ದಾರೆ.



Join Whatsapp