“ಮುಸ್ಲಿಮರ ಶೈಕ್ಷಣಿಕ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ”: ಕುಂದಾಪುರದ ಹಿಜಾಬ್ ನಿಷೇಧದ ಕುರಿತು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ

Prasthutha|

‘ಮುಸ್ಲಿಮರ ಕಡೆಗಣಿಸುವಿಕೆಯನ್ನು ಕಾನೂನು ಬದ್ಧಗೊಳಿಸುವ ಪ್ರಯತ್ನವಿದು’

- Advertisement -

ನವದೆಹಲಿ: ಕುಂದಾಪುರದಲ್ಲಿ ತಲೆವಸ್ತ್ರ ಧರಿಸಿ ಕಾಲೇಜು ಆಗಮಿಸದಂತೆ ಮುಸ್ಲಿಮ್ ವಿದ್ಯಾರ್ಥಿನಿಗಳನ್ನು ತಡೆದ ಕಾಲೇಜು ಪ್ರಾಶುಂಪಾಲರ ಮತ್ತು ಕರ್ನಾಟಕ ಸರ್ಕಾರದ ನಿಲುವನ್ನು ವಿರೋಧಿಸಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬೇಟಿ ಬಚಾವೋ ಬೇಟಿ ಪಡಾವೋ’ ಎಂಬುದು ಬಿಜೆಪಿ ಸರ್ಕಾರ ಮತ್ತೊಂದು ಪೊಳ್ಳು ಘೋಷಣೆಯಾಗಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಕಿಡಿಕಾರಿದ್ದಾರೆ.

- Advertisement -

ಟ್ವೀಟ್ ಮೂಲಕ ಈ ಕುರಿತು ಪ್ರತಿಕ್ರಿಯಿಸಿದ ಅವರು, ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ತಮ್ಮ ವಸ್ತ್ರದ ಕಾರಣಕ್ಕಾಗಿ ಶಿಕ್ಷಣದ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಮುಸ್ಲಿಮರ ಕಡೆಗಣಿಸುವಿಕೆಯನ್ನು ಕಾನೂನುಬದ್ಧಗೊಳಿಸುವುದು ಗಾಂಧೀಜಿಯ ಭಾರತವನ್ನು ಗೋಡ್ಸೆಯ ಸಂತತಿಗಳ ಕೈಗೆ ಒಪ್ಪಿಸಿದಂತಾಗುತ್ತದೆ ಎಂದು ಅವರು ತಿಳಿಸಿದರು.

Join Whatsapp