ಅಸ್ಸಾಂ: ಎನ್.ಆರ್.ಸಿ ಹೋರಾಟ ನಿರತ ವ್ಯಕ್ತಿ ಆತ್ಮಹತ್ಯೆ !

Prasthutha|

ಗುವಾಹಟಿ: ಒಣಮೀನು ವ್ಯಾಪಾರಿಯಾದ ಮಾಣಿಕ್ ದಾಸ್ ಎಂಬವರು ಡಿಸೆಂಬರ್ 2019 ರಿಂದ ಅಸ್ಸಾಂನ ವಿದೇಶಿಯರ ನ್ಯಾಯಮಂಡಳಿಯ ಮುಂದೆ (ಎಫ್.ಟಿ) ಮುಂದೆ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಕಾನೂನು ಹೋರಾಟ ನಡೆಸುತ್ತಿದ್ದು, ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

- Advertisement -

ಈ ಮಧ್ಯೆ ಮಾಣಿಕ್ ದಾಸ್ ಅವರ ಹೆಸರು ಎನ್.ಆರ್. ಸಿ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ನನ್ನ ತಂದೆ ಸೇರಿದಂತೆ ನಮ್ಮ ಎಲ್ಲಾ ಹೆಸರುಗಳು ಎನ್.ಆರ್. ಸಿ ಕಾಣಿಸಿಕೊಂಡಿವೆ. ಆದರೆ 2019 ರ ಡಿಸೆಂಬರ್ ನಲ್ಲಿ ಪೌರತ್ವ ಸಾಬೀತುಪಡಿಸುವಂತೆ ನೋಟಿಸ್ ನೀಡಲಾಗಿತ್ತು ಎಂದು ಮಾಣಿಕ್ ದಾಸ್ ಅವರ ಮಗ ಕಾರ್ತಿಕ್ ದಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಾಣಿಕ್ ದಾಸ್ ಬಳಿ ಪಾನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಭೂ ದಾಖಲೆಗಳಂತಹ ಎಲ್ಲಾ ಗುರುತಿನ ದಾಖಲೆಗಳಿವೆ ಎಂದು ಮಾಣಿಕ್ ಪರ ವಕೀಲ ದೀಪಕ್ ಬಿಸ್ವಾಸ್ ಹೇಳಿದ್ದಾರೆ.

- Advertisement -

2004ರಲ್ಲಿ ದಾಸ್ ವಿರುದ್ಧ ಟ್ರಿಬ್ಯೂನಲ್‌ ನಲ್ಲಿ ಪ್ರಕರಣ ದಾಖಲಾಗಿತ್ತು. ಅಸ್ಸಾಂ ಗಡಿ ಪೊಲೀಸರು ದಾಸ್ “ವಿದೇಶಿ” ಎಂದು ಶಂಕಿಸಿ ಉಲ್ಲೇಖ ಪ್ರಕರಣ ದಾಖಲಿಸಲಾಗಿತ್ತು.

ಸದ್ಯ ಮಾಣಿಕ್ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸದ್ಯ ಅಸ್ಸಾಂ ನಲ್ಲಿ ಪೌರತ್ವ ಪರೀಕ್ಷೆಯು ಜನರನ್ನು ಭಯದ ವಾತಾವರಣದಲ್ಲಿ ಜೀವಿಸುವಂತೆ ಮಾಡಿದೆ ಮತ್ತು ಹಲವು ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

Join Whatsapp