ಸಹೋದ್ಯೋಗಿಯ ಕಾಟಕ್ಕೆ ಬೇಸತ್ತು ದಂತ ವೈದ್ಯೆ ಆತ್ಮಹತ್ಯೆ

Prasthutha|

ಬೆಂಗಳೂರು: ಪ್ರೇಮಿಯ ಕಾಟಕ್ಕೆ ಬೇಸತ್ತು ದಂತ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸಂಜಯ್ ನಗರದಲ್ಲಿ ನಡೆದಿದೆ.


ಉತ್ತರಪ್ರದೇಶದ ಲಕ್ನೋ ಮೂಲದ ದಂತ ವ್ಯೆದ್ಯೆ ಪ್ರಿಯಾಂನ್ಷಿ ತ್ರಿಪಾಠಿ ಅವರು ಕಳೆದ ಜ.25 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿದೆ.

- Advertisement -


ಎಂ ಎಸ್ ರಾಮಯ್ಯ ಆಸ್ಪತ್ರೆಯ ದಂತವೈದ್ಯೆ ಆಗಿದ್ದ ಪ್ರಿಯಾಂನ್ಷಿ ಅವರಿಗೆ ಅದೇ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಸುಮಿತ್, ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಆದರೆ ಪ್ರಿಯಾಂನ್ಷಿ ಪ್ರೀತಿಗೆ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ವೈದ್ಯ ಸುಮಿತ್, ಪ್ರಿಯಾಂನ್ಷಿ ತ್ರಿಪಾಠಿಯ ವ್ಯಕ್ತಿತ್ವದ ಬಗ್ಗೆ ಕೆಟ್ಟದಾಗಿ ಬಿಂಬಿಸಿದ್ದ ಎಂದು ಆರೋಪಿಸಲಾಗಿದೆ.


ಆಕೆ ಸರಿಯಿಲ್ಲ, ಸಿಗರೆಟ್ ಸೇದುತ್ತಾಳೆ, ಮದ್ಯಪಾನ ಮಾಡ್ತಾಳೆ. ಸಿಕ್ಕ ಸಿಕ್ಕವರ ಜೊತೆಗೆ ಓಡಾಡುತ್ತಾಳೆ ಎಂದು ಆಕೆಯ ಬಗ್ಗೆ ಇಲ್ಲಸಲ್ಲದ್ದನ್ನು ಸುಮಿತ್ ಹೇಳುತ್ತಿದ್ದ ಎನ್ನಲಾಗಿದೆ.
ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಪ್ರಿಯಾಂನ್ಷಿ ತ್ರಿಪಾಠಿ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.


ಆತ್ಮಹತ್ಯೆ ಮಾಡಿಕೊಂಡ ಕೆಲ ದಿನಗಳ ಬಳಿಕ ಕೃತ್ಯ ಬೆಳಕಿಗೆ ಬಂದಿದ್ದು, ಈ ಸಂಬಂಧ ಪ್ರಿಯಾಂನ್ಷಿ ತಂದೆ ಸುಶೀಲ್ ತ್ರಿಪಾಠಿ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿರುವ ಸಂಜಯನಗರ ಪೊಲೀಸರು ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

- Advertisement -